

ಯಲಬುರ್ಗಾ: ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮೇ 10 ರಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಬೇಕು ಎಂದು ತಹಸೀಲ್ದಾರ್ ಬಸವರಾಜ್ ತೆನ್ನಳ್ಳಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಮಾಜದ ಅಧ್ಯಕ್ಷ ದೇವಪ್ಪ ಅರಕೇರಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸುವ ಮೂಲಕ ಸಮಾಜಕ್ಕೆ ಒಳ್ಳೆ ಸಂದೇಶ ನೀಡಬೇಕು. ಎಲ್ಲರೂ ಸರ್ವಧರ್ಮ ಸಮನ್ವಯತೆ ಸಾರೋಣ. ಸಮಾಜದ ವತಿಯಿಂದ ದಿನಾಂಕ ನಿಗದಿ ಪಡಿಸಿ ಜಯಂತಿ ಆಚರಿಸಲಾಗುತ್ತಿದ್ದು, ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.
ಶಿರಸ್ತೇದಾರ್ ಎಂ.ದೇವರಡ್ಡಿ, ಪಪಂ ಮುಖ್ಯಾಧಿಕಾರಿ ನಾಗೇಶ್, ಸದಸ್ಯರಾದ ರೇವಣಪ್ಪ ಹಿರೇಕುರಬರ, ಹನಮಂತ ಭಜಂತ್ರಿ, ಪ್ರಮುಖರಾದ ಹೇಮರೆಡ್ಡಿ ಮುಧೋಳ ಹನುಮನಗೌಡ ಪಾಟೀಲ್ ಇತರರಿದ್ದರು.