ಕೈಮಗ್ಗ ನೇಕಾರಿಕೆ ಹೊಸತನಕ್ಕೆ ತೆರೆದುಕೊಳ್ಳಲಿ

7RAM1
Published on

ರಾಮದುರ್ಗ: ಆಧುನಿಕ ತಂತ್ರಜ್ಞಾನದಿಂದ ಕೆಮಗ್ಗ ನೇಕಾರಿಕೆ ನೇಪಥ್ಯಕ್ಕೆ ಸರಿಯುತ್ತಿದ್ದು, ಹೊಸತನ ಅಳವಡಿಸಿಕೊಂಡು ನೇಕಾರಿಕೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಾಗಿದೆ ಎಂದು ರಾಜ್ಯ ದೇವಾಂಗ ಸಂದ ಉಪಾಧ್ಯ ಎಸ್​. ಎಂ. ಮುರುಡಿ ಹೇಳಿದರು.

11ನೇ ರಾಷ್ಟ್ರೀಯ ಕೆಮಗ್ಗ ದಿನಾಚರಣೆಯ ಪ್ರಯುಕ್ತ ಬನಶಂಕರಿ ದೇವಿ ದೇವಾಂಗ ಸಮಾಜ ಹಾಗೂ ತಾಲೂಕು ನೇಕಾರರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಪಟ್ಟಣದ ನೇಕಾರ ಪೇಟೆಯಲ್ಲಿನ ಕೆಮಗ್ಗ ನೇಕಾರ ಮಗ್ಗಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಕೆಮಗ್ಗ ಬದಲಾಗಿ ವಿದ್ಯುತ್​ ಮಗ್ಗಗಳ ಮೂಲಕ ಅನೇಕರು ವತ್ತಿ ಮುಂದುವರಿಸಿದ್ದಾರೆ. ಆದರೆ, ಕೆಮಗ್ಗದ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದ್ದು, ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದರು.

ಯುವ ಮುಖಂಡ ವಿನೋದ ಕರದಿನ ಮಾತನಾಡಿ, ಸ್ವಾತಂತ್ರ್ಯ ಚಳವಳಿಯಲ್ಲಿ ಕೆಮಗ್ಗದಲ್ಲಿ ತಯಾರಾದ ಸ್ವದೇಶಿ ಬಟ್ಟೆಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ವಿದೇಶಿ ಬಟ್ಟೆಗಳನ್ನು ಸುಡಲಾಯಿತು. ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ನಂತರ ಕೇಂದ್ರ ಸರ್ಕಾರ ಕೆಮಗ್ಗ ನೇಕಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಅನೇಕ ಸಾಧಕ ನೇಕಾರರಿಗೆ ಪುರಸ್ಕಾರ ನೀಡುತ್ತಿರುವುದು ಶ್ಲಾನೀಯ ಎಂದರು.

ಬನಶಂಕರಿದೇವಿ ದೇವಾಂಗ ಸಮುದಾಯದ ಅಧ್ಯ ಕುಬೇರ ಗರಡಿಮನಿ, ಉಪಾಧ್ಯ ರವಿ ಕರಡಿಗುಡ್ಡ, ತಾಲೂಕು ನೇಕಾರ ಒಕ್ಕೂಟದ ಅಧ್ಯ ನಾರಾಯಣ ಹೂಲಿ, ಖಜಾಂಚಿ ಸುರೇಶ ಬಳಕುಂದಿ, ಸದಸ್ಯರಾದ ಅನಿಲ ರಾಮದುರ್ಗ, ಗಣೇಶ ಮೊಕೆನವರ್​, ಶ್ರೀಕಾಂತ ಹೊಸಮನಿ, ತುಕಾರಾಮ ಕಲ್ಲೂರ, ಗಂಗವ್ವ ಮುಗಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net