ದೇಶದ ಅಭಿವೃದ್ಧಿಗೆ ಕೈಜೋಡಿಸಲಿ

3ITAGI2
Published on

ಇಟಗಿ: ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಣದ ಪಾತ್ರ ಮುಖ್ಯವಾಗಿದೆ. ವಿದ್ಯಾರ್ಥಿಗಳು ಕೌಶಲ ಆಧಾರಿತ ಹಾಗೂ ಗುಣಾತ್ಮಕ ಶಿಣ ಪಡೆದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಸಮೀಪದ ಪಾರಿಶ್ವಾಡ ಗ್ರಾಮದ ಬಿ.ವಿ.ಸಂಬರಗಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ವಿವಿಧ ೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಹೀಗಾಗಿ, ನಿರಂತರ ಅಧ್ಯಯನ ಜತೆಗೆ ಶಿಕರ ಮಾರ್ಗದರ್ಶನ ಪಡೆದು ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸ್ಥೆ ಚೇರ್ಮನ್​ ಚಂದ್ರಶೇಖರ ಸಂಬರಗಿ ಮಾತನಾಡಿ, ವಿದ್ಯಾರ್ಥಿಗಳು ಸಂಸತಿ, ಸಂಸ್ಕಾರ ರೂಢಿಸಿಕೊಳ್ಳುವ ಮೂಲಕ ಗುರು&ಹಿರಿಯರನ್ನು ಗೌರವಿಸಬೇಕು ಎಂದು ತಿಳಿಸಿದರು.

ಸಾಹಿತಿ ರಾಮಚಂದ್ರ ಶೆಟ್ಟರ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಅಶೋಕ ಅಂಗಡಿ, ನಿರ್ದೇಶಕರಾದ ಎಂ.ಆರ್​.ಅಲಾಬಾದಿ, ಬಿ.ಕೆ.ರಾಜನ್ನವರ, ಎಸ್​.ಎ.ಅಳವಣಿ, ಸಿ.ಎಂ.ಪಾಟೀಲ, ಮುಖ್ಯಶಿಕ ಎಂ.ಬಿ.ಹೆರೂರ, ನಾಗೇಂದ್ರ ಚೌಗಲಾ, ಎಸ್​.ಪಿ.ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net