ನೈಸರ್ಗಿಕ ಸಂರಕ್ಷಣೆಗೆ ಮುಂದಾಗೋಣ

18-SGN-1- vvvvvv
Published on

ಶಿಗ್ಗಾಂವಿ: ಆರೋಗ್ಯಕರ ಬದುಕು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಅತಿ ಅಗತ್ಯವಾಗಿದೆ. ಅದಕ್ಕಾಗಿ ನಾವು ಮರ- ಗಿಡಗಳನ್ನು ಹೆಚ್ಚಾಗಿ ನೆಡುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಮುಂದಾಗೋಣ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಲ್. ಪಾಟೀಲ ಹೇಳಿದರು.


ಅಖಿಲ ಭಾರತ ಸಮನ್ವಯ ಕೃಷಿ ಅರಣ್ಯ ಸಂಶೋಧನಾ ಯೋಜನೆಯಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ಇತ್ತೀಚೆಗೆ ಪ್ರಗತಿಪರ ರೈತ ಶಿವಾನಂದ ರಾಮಗೇರಿ ಅವರ ಹೊಲದ ಬದುಗಳಲ್ಲಿ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ.ಎಸ್.ಎಸ್. ಅಂಗಡಿ ಮಾತನಾಡಿ, ಹವಾಮಾನ ನಿಯಂತ್ರಿಸುವಲ್ಲಿ ಗಿಡಮರಗಳ ಪಾತ್ರ ಮಹತ್ವದ್ದಾಗಿದೆ. ಸಸಿಗಳನ್ನು ನೆಟ್ಟು ಅವುಗಳನ್ನು ಪಾಲನೆ ಮಾಡುವ ಪರಿಸರವನ್ನು ರಕ್ಷಿಸಿ ಉತ್ತಮ ಆರೋಗ್ಯ ಹೊಂದಬೇಕು ಎಂದರು.


ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಣವ್ವ ಬಸಪ್ಪ ಬಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿವಿ ವಿಜ್ಞಾನಿಗಳಾದ ಎಚ್.ವೈ. ಪಾಟೀಲ, ಎಸ್.ಟಿ. ಹುಂಡೇಕರ ಮತ್ತು ಎಸ್.ಎಂ. ಘಟನಟ್ಟಿ ಪರಿಸರ ರಕ್ಷಣೆ ಜಾಗೃತಿ ಕುರಿತು ಉಪನ್ಯಾಸ ನೀಡಿದರು.


ಮುಗಳಿ, ಬನ್ನೂರು, ಬಸರಿಕಟ್ಟಿ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. ರಾಮಚಂದ್ರ ಜಾಧವ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net