ವಚನಕಾರರ ಆದರ್ಶ ಅನುಸರಿಸೋಣ

ವಚನಕಾರರ ಆದರ್ಶ ಅನುಸರಿಸೋಣ
Published on

ಎಚ್.ಡಿ. ಕೋಟೆ: ವೃತ್ತಿಯಿಂದ ಜಾತಿ ಬಂದಿದೆ, ಜಾತಿಯಿಂದ ವೃತ್ತಿ ಬಂದಿಲ್ಲ ಎಂದು ಶಾಸಕ ಅನಿಲ್‌ಕುಮಾರ್ ಹೇಳಿದರು.

ಪಟ್ಟಣದ ವಿಶ್ವನಾಥಯ್ಯ ಕಾಲನಿಯಲ್ಲಿ ಮಡಿವಾಳ ಸಮುದಾಯದ ವತಿಯಿಂದ ಶನಿವಾರ ನಡೆದ ಶ್ರೀ ಮಡಿವಾಳ ಮಾಚೀದೇವ ಜಯಂತಿ ಮತ್ತು ಸಮುದಾಯ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಶ್ರೀಮಂತ, ಬಡವ, ಬಲ್ಲಿದ ಎಂಬ ಭೇದ-ಭಾವಗಳಿಲ್ಲದೆ ಬಾಳಿದವರು ವಚನಕಾರರು, ಅವರ ಶ್ರಮವನ್ನು ನಾವು ಇಂದು ವ್ಯರ್ಥವಾಗದ ರೀತಿ ಭೇದ ಭಾವವಿಲ್ಲದ ರೀತಿ ಅನುಸರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಮಡಿವಾಳ ಜನಾಂಗಕ್ಕ್ಕೆೆ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ 80 ಲಕ್ಷ ರೂ. ಅನುದಾನ ಬಿಡುಗಡೆಗೆ ಕ್ರಮ ವಹಿಸಿ, ಪುರಸಭಾ ವತಿಯಿಂದ 8 ಗುಂಟೆ ಜಾಗವನ್ನು ನೀಡಲಾಗಿದೆ, ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಮಂಜೂರಾಗಿದ್ದು, ಪ್ರಸ್ತುತ 25 ಲಕ್ಷ ರೂ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದರು.

ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಗಳಾಗಿ ಮಾಚೀದೇವರು ಹಲವು ವಚನಗಳನ್ನು ರಚಿಸಿದ್ದು, ಅಸಮಾನತೆಯ ವಿರುದ್ಧ ಹೋರಾಡಿದರು ಎಂದರು.

ಮಡಿವಾಳ ಮಾಚೀದೇವರ ಕುರಿತು ಶಿಕ್ಷಕ ಡಾ.ಕಿರಣ್ ಸಿಡ್ಲೇಹಳ್ಳಿ ಮಾತನಾಡಿದರು.

ಪುರಸಭಾ ಮುಖ್ಯಾಧಿಕಾರಿ ಸುರೇಶ್, ಸದಸ್ಯ ರಾಜು ವಿಶ್ವಕರ್ಮ, ಮಧು, ಶಾಂತಮ್ಮ ಗೋವಿಂದರಾಜು, ದಿನೇಶ್, ಈರೇಗೌಡ, ಎಚ್.ಕೆ. ಪ್ರಕಾಶ್, ಮಂಜುನಾಥ್, ಮಡಿವಾಳರ ಸಂಘದ ಮಹೇಶ್, ಧರಣೇಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಶಿಕಲಾ, ಬಿಇಒ ಕಾಂತರಾಜು, ಶಿವಪ್ಪ ಶೆಟ್ಟಿ, ನಾಗರಾಜು, ರಂಗಸ್ವಾಮಿ, ಸೌಮ್ಯಾ, ತಿಮ್ಮಶೆಟ್ಟಿ, ಮಲ್ಲೇಶ್, ಜವರಯ್ಯ, ಫಯಾಜ್ ಪಾಷ, ಬೀರೇಶ್, ಚಂದ್ರಶೆಟ್ಟಿ, ರಾಮಶೆಟ್ಟಿ, ಕಾಳಶೆಟ್ಟಿ, ರಾಜಣ್ಣ, ಮಂಚಯ್ಯಶೆಟ್ಟಿ, ಶಿವಣ್ಣ, ಹೊನ್ನಶೆಟ್ಟಿ, ರಮೇಶ್ ಕೋಟೆ, ನೂರ್ ಪಾಷ, ಸವಿತಾ, ಶಿವರಾಜು, ಸಿದ್ದಶೆಟ್ಟಿ, ಸುರೇಶ್, ಬಸವರಾಜು, ಈರಾಜ್, ಮರಿಲಿಂಗಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net