ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲಿ

12MURAGOD1
Published on

ಮುರಗೋಡ: ವಿದ್ಯಾರ್ಥಿಗಳು ಮಾನಸಿಕ ನೆಮ್ಮದಿ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ

ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಸಮೀಪದ ಹಾರುಗೊಪ್ಪ ಸರ್ಕಾರಿ ಪ್ರೌಢಶಾಲೆ ಮೆದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸವದತ್ತಿ ತಾಲೂಕುಮಟ್ಟದ ಪ್ರೌಢಶಾಲೆಗಳ ಥ್ರೋಬಾಲ್​ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೆಹಿಕ ಸಾಮರ್ಥ್ಯ ಹೆಚ್ಚಿಸುವ ಶಕ್ತಿ ಕ್ರೀಡೆಗಳಿಗಿದ್ದು, ಆಟೋಟಗಳಲ್ಲಿ ಸೋಲು&ಗೆಲುವು ಮುಖ್ಯವಲ್ಲ. ಭಾಗವಹಿಸಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯ ಎಂದರು.

ಎಸ್​ಡಿಎಂಸಿ ಅಧ್ಯ ವಿಠ್ಠಲ ಸೂರಪ್ಪನವರ ಉದ್ಘಾಟಿಸಿದರು. ವಿಜೇತ ಮಕ್ಕಳಿಗೆ ಪ್ರಶಸ್ತಿಪತ್ರ ಮತ್ತು ಪದಕ ವಿತರಿಸಲಾಯಿತು. ದೆಹಿಕ ಶಿಕ್ಷಣ ಶಿಕರಾದ ಎಂ.ಸಿ.ತಲ್ಲೂರ, ಶಿವಾನಂದ ಅರಬಾವಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಎಸ್​.ವಿ.ಯರಡ್ಡಿ, ಬಿಇಒ ಎ.ಎ.ಮುಲ್ಲಾ, ಗ್ರಾಪಂ ಅಧ್ಯೆ ಚನ್ನವ್ವ ಕುಲಗೋಡ, ಸಿ.ಬಿ.ಜಕ್ಕನ್ನವರ, ಶಿವಾನಂದ ನೀಲಪ್ಪನ್ನವರ, ಸಿದ್ದಪ್ಪ ಕುಲಗೂಡ, ವೀರಭದ್ರ ಚಚಡಿ, ವಿಠ್ಠಲ ಕಾಗಿ, ಕೀರಪ್ಪ ಕರೆನ್ನವರ್​, ಚಿದಾನಂದ ಪೂಜೇರಿ, ಸವಿತಾ ಬಡ್ಡಿವಡ್ಡರ, ಎಂ.ಬಿ.ಮಾಳಗಿ, ಬಸವರಾಜ ಪಟ್ಟಣ, ಎ್​.ವೈ.ಮಾರಿಹಾಳ, ಮಹೇಶ ಅಂಗಡಿ, ವಿ.ಎ್​. ಮರಿತಮ್ಮನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net