ಶಾಂತ ರೀತಿಯಿಂದ ಹಬ್ಬ ಆಚರಿಸಲಿ

20Savadatti1
Published on

ಸವದತ್ತಿ: ತಾಲೂಕಾಡಳಿತ ಮತ್ತು ಪೊಲೀಸ್​ ಇಲಾಖೆ ನಿಯಮಗಳಿಗೆ ಬದ್ಧವಾಗಿ ಶಾಂತ ರೀತಿಯಿಂದ ಹಬ್ಬ ಆಚರಿಸಬೇಕು ಎಂದು ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗಣ್ಣವರ ತಿಳಿಸಿದರು.

ಇಲ್ಲಿನ ಗುರುಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿ, ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಕೈಗೊಳ್ಳುವ ಮಂಡಳಿಗಳಿಗೆ ಒಂದೇ ಕಡೆ ಎಲ್ಲ ಪರವಾನಗಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗಾ ವಹಿಸಬೇಕು. ಸುಪ್ರೀಂ ಕೋರ್ಟ್​ ಆದೇಶದಂತೆ ಡಿಜೆ ನಿಷೇಧಿಸಲಾಗಿದೆ ಎಂದರು.

ಡಿವೈಎಸ್ಪಿ ಚಿದಂಬರ ಮಡಿವಾಳರ ಮಾತನಾಡಿ, ಗಣೇಶ ಮಂಟಪದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಳ್ಳುವುದು ಉತ್ತಮ ಎಂದರು.

ಪಿಐ ಧರ್ಮಾಕರ ಧರ್ಮಟ್ಟಿ, ಮಲ್ಲು ಬೀಳಗಿ, ಎ್​.ಎಂ.ನದ್​ಾ, ಪಿಎಸ್​ಐ ಕಲ್ಮೇಶ ಬನ್ನೂರ, ಅಪರಾಧ ವಿಭಾಗ ಪಿಎಸ್​ಐ ಲಕ್ಷ$್ಮಣ ಗೌಡಿ, ಹೆಸ್ಕಾಂ ಎಇಇ ವಿಶಾಪೂರಕರ, ಪುರಸಭೆ ಆರೋಗ್ಯಾಧಿಕಾರಿ ಚಂದ್ರಶೇಖರ ಮಲಕನ್ನವರ, ಲಕ್ಷ$್ಮಣ ಕುಲಕರ್ಣಿ, ಕೆ.ಕೆ.ಪುಣೆದ, ಮಲ್ಲು ಬೀಳಗಿ, ಅಮೀರ ಗೊರೇನಾಯ್ಕ, ಮೌಲಾಸಾಬ್​ ತಬ್ಬಲಜಿ, ರಾಜು ಚುಳಕಿ, ರಾವೇಂದ್ರ ಪೂಜೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net