ಶಾಂತಿಯುತವಾಗಿ ಮೊಹರಂ ಆಚರಿಸಲಿ

28Savadatti1
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.6445367, 0.62833333);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 33;
Published on

ಸವದತ್ತಿ: ಹಿಂದು&ಮುಸ್ಲಿಂ ಭಾವೈಕ್ಯ ಹಾಗೂ ಸೌಹಾರ್ದಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ಧರ್ಮಾಕರ ಧರ್ಮಟ್ಟಿ ತಿಳಿಸಿದರು.

ಪಟ್ಟಣದ ಪೊಲೀಸ್​ ಠಾಣೆ ಆವರಣದಲ್ಲಿ ಈಚೆಗೆ ಹಮ್ಮಿಕೊಂದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಮೊಹರಂ ಕೊನೆಯ ದಿನ ನಿಗದಿತ ಸಮಯಕ್ಕೆ ಮೆರವಣಿಗೆ ಆರಂಭಿಸಿ ಸಹಕರಿಸಬೇಕು. ಅಹಿತಕರ ಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ, ವ್ಯಕ್ತಿಗಳ ಭಾವನೆಗೆ ಧಕ್ಕೆ ತರುವಂತ ಪೋಸ್ಟ್​ ಹಾಕಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡ ಲ$್ಮಣ ಕುಲಕರ್ಣಿ ಮಾತನಾಡಿ, ಎಲ್ಲ ಸಮುದಾಯದವರು ಒಗ್ಗೂಡಿ ಪಟ್ಟಣದಲ್ಲಿ ಮೊಹರಂ ಆಚರಿಸುತ್ತ ಬಂದಿದ್ದೇವೆ. ಈ ಬಾರಿಯೂ ಅಚ್ಚುಕಟ್ಟಾಗಿ ಆಚರಿಸುತ್ತೇವೆ ಎಂದರು.

ಪಿಎಸ್​ಐ ಕೆ.ಎಂ.ಬನ್ನೂರ ಮಾತನಾಡಿದರು. ಯಲ್ಲಪ್ಪ ಗೊರವನಕೊಳ್ಳ, ದಿಲಾವರ ಸನದಿ, ಹುಸೇನ್​ ಗೋರವನಕೊಳ್ಳ, ಬಾಬುಸಾಬ್​ ನಾಶಿಪುಡಿ, ಮೌಲಾಸಾಬ್​ ತಬ್ಬಲಜಿ, ಲತ್​ಿ ಸವದತ್ತಿ, ದಿಲಾವರ್​ ಮುಲ್ಲಾ, ಬಿ.ಬಿ.ಆಯಟ್ಟಿ, ರಜಾಕ್​ ಗುಡುಗುಡಿ, ಮಕ್ತುಮ್​ ತಹಶೀಲ್ದಾರ್​, ಅಲೀಸಾಬ್​ ನೂಲಗಿ, ಹುಸೇನ್​ ಬೈರಕದಾರ, ಹುಸೇನ ದಂಡಿನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net