

ಹರಪನಹಳ್ಳಿ: ದೇಶೀಯ ಕಲೆಗಳನ್ನು ಉಳಿಸಿ, ಬೆಳೆಸುವುದರಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಸಂಗಪ್ಪನವರ್ ಹೇಳಿದರು.
ತಾಲೂಕಿನ ಚನ್ನಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಜಾಗತೀಕರಣದ ಪರಿಣಾಮ ವಿದೇಶಿ ಸಂಸ್ಕೃತಿಗೆ ಮಾರು ಹೋಗಿದ್ದು, ದೇಶೀಯ ಕಲೆಗಳಾದ ನಾಟಕ, ಕೋಲಾಟ, ಬಯಲಾಟ, ಜನಪದ ಗೀತೆದಂತಹ ಕಲೆಗಳು ಮರೆಯಾಗುತ್ತಿವೆ. ಅವುಗಳನ್ನು ಉಳಿಸಿ, ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಇದನ್ನೂ ಓದಿ: ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ
ಗ್ರಾಪಂ ಸದಸ್ಯರಾದ ಸವಿತಾ ನಾಗರಾಜ್, ಮೀನಾಕ್ಷಿ ಚಂದ್ರನಾಯ್ಕ, ಸಿಆರ್‌ಪಿ. ಪುಷ್ಪಾವತಿ, ಮಂಜುನಾಥ್, ಶರೀಫ್, ನಾಗರಾಜ್ ನಾಯ್ಕ, ಹನುಮಂತ ನಾಯ್ಕ, ನಾಗ್ಯಾನಾಯ್ಕಾ, ಕೆ.ಸಿದ್ದೇಶ್, ಬಂದಮ್ಮ, ವೀರೇಶ ನಾಯ್ಕ ಇತರರಿದ್ದರು.