

ಹೊನ್ನಾಳಿ: ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ವೈಯಕ್ತಿಕ ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜ್ ತಿಳಿಸಿದರು.
ತಾಲೂಕಿನ ಸಿಂಗಟಕೆರೆ ಗ್ರಾಮದ ಕಿತ್ತೂರುರಾಣಿ ಚೆನ್ನಮ ವಸತಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕುಂದೂರು ವಲಯದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಆದರೆ, ಅದನ್ನು ಹೊರ ತೆಗೆಯಲು ಇಂತಹ ವೇದಿಕೆಗಳು ಸಹಾಯವಾಗುತ್ತದೆ. ಆದ್ದರಿಂದ ಇಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳು ಪಾಲ್ಗೊಳ್ಳಬೇಕು ಎಂದರು.
ತಿಮ್ಲಾಪುರ ಗ್ರಾಪಂ ಅಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಭಾರತ ಇಡೀ ವಿಶ್ವದಲ್ಲೇ ಯಾರು ಮಾಡದ ಸಾಧನೆ ಮಾಡುತ್ತಿದ್ದ್ದು, ನಾವೆಲ್ಲರೂ ಭಾರತೀಯರು ಎಂದು ಹೇಳಿಕೊಳ್ಳಲಿಕ್ಕೆ ಹೆಮ್ಮೆಯಾಗುತ್ತದೆ ಎಂದರು.
ವಸತಿ ಶಾಲೆ ಪ್ರಾಚಾರ್ಯ ಶಿವಕುಮಾರ್, ಬಿಆರ್‌ಸಿ ತಿಪ್ಪೇಶಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರುದ್ರಪ್ಪ, ಇಸಿಒ ಬಸವರಾಜ್ ಮಾತನಾಡಿದರು.
ಗ್ರಾಪಂ ಸದಸ್ಯ ಜಯಪ್ಪ, ಟಿ. ಶೇಖರಪ್ಪ, ಪ್ರೇಮಾ, ಲಲಿತಾಬಾಯಿ, ಅಶ್ವಿನಿ, ಕಿರಣ್, ಅನುಪಮಾ ಮತ್ತಿತರರಿದ್ದರು.