ಸರ್ವರು ಭಾವೈಕ್ಯದಿಂದ ಹಬ್ಬ ಆಚರಿಸಿ

ಕಂಪ್ಲಿಯ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಡಿವೈಎಸ್‌ಪಿ ಪ್ರಸಾದ್ ಗೋಖಲೆ ಮಾತನಾಡಿದರು. ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಪಿಐ ಕೆ.ಬಿ.ವಾಸುಕುಮಾರ್, ಪಿಎಸ್‌ಐ ಅವಿನಾಶ್ ಕಾಂಬ್ಲೆ ಇದ್ದರು.
ಕಂಪ್ಲಿಯ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಡಿವೈಎಸ್‌ಪಿ ಪ್ರಸಾದ್ ಗೋಖಲೆ ಮಾತನಾಡಿದರು. ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಪಿಐ ಕೆ.ಬಿ.ವಾಸುಕುಮಾರ್, ಪಿಎಸ್‌ಐ ಅವಿನಾಶ್ ಕಾಂಬ್ಲೆ ಇದ್ದರು.
Published on

ಕಂಪ್ಲಿ: ಸರ್ವ ಧರ್ಮಿಯರೂ ಭಾವೈಕ್ಯ, ಸಹಿಷ್ಣುತೆಯಿಂದ ಯುಗಾದಿ, ರಂಜಾನ್ ಹಬ್ಬಗಳನ್ನು ಆಚರಿಸಬೇಕು ಎಂದು ಡಿವೈಎಸ್‌ಪಿ ಪ್ರಸಾದ್ ಗೋಖಲೆ ಹೇಳಿದರು.

ನಗರ ಪೊಲೀಸ್ ಠಾಣೆಯಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬಗಳ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಪಿಐ ಕೆ.ಬಿ.ವಾಸುಕುಮಾರ್ ಮಾತನಾಡಿ, ಪುರಸಭೆಯಿಂದ 14ಲಕ್ಷ ರೂ. ವೆಚ್ಚದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಬಣ್ಣದಾಟದಲ್ಲಿ ಮತ್ತೊಬ್ಬರ ಮನಸ್ಸಿಗೆ ಘಾಸಿಯಾಗದಂತೆ ಮುತುವರ್ಜಿ ವಹಿಸಬೇಕು ಎಂದರು. ಪ್ರಮುಖರು ಮಾತನಾಡಿ, ಯುವಜನತೆ ಮೇಲೆ ನಿಗಾವಹಿಸಿ. ರಂಜಾನ್ ಹಬ್ಬದ ದಿನ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಹೇಳಿದರು.

ಪಿಎಸ್‌ಐ ಅವಿನಾಶ್ ಕಾಂಬ್ಳೆ, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಪ್ರಮುಖರಾದ ಎಂ.ಉಸ್ಮಾನ್, ಕರೇಕಲ್ ಮನೋಹರ, ಡಾ.ವೆಂಕಟೇಶ, ಬಿ.ಸಿದ್ದಪ್ಪ, ಕೆ.ಮೆಹಬೂಬ್, ನೇಣ್ಕಿ ಗಿರೀಶ್, ಅಕ್ಕಿಜಿಲಾನ್, ಕೆ.ಷಣ್ಮುಖ, ಎಸ್.ಚಂದ್ರಶೇಖರಗೌಡ, ಎಚ್.ಕುಮಾರಸ್ವಾಮಿ, ಎಚ್.ರಾಜಶೇಖರಗೌಡ, ಜಿ.ಜಿ.ಚಂದ್ರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net