ನಾಡು, ನುಡಿ ರಕ್ಷಣೆಗೆ ಮಹಿಳೆಯರು ಕೈಜೋಡಿಸಲಿ

ನಾಡು, ನುಡಿ ರಕ್ಷಣೆಗೆ ಮಹಿಳೆಯರು ಕೈಜೋಡಿಸಲಿ
Published on

ಹಾಸನ: ಮಹಿಳೆಯರು ಸಂಕೋಚ ಬಿಟ್ಟು ಸಂತೋಷದಿಂದ ನಾಡು, ನುಡಿ, ನೆಲ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿಕೊಳ್ಳಬೇಕು ಎಂದು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಖಾ ಮಂಜುನಾಥ್ ಸಲಹೆ ನೀಡಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾಡು, ನುಡಿಗಾಗಿ ನಾರಾಯಣಗೌಡ ಅವರಿಗೆ ಬೆಂಬಲ ನೀಡಬೇಕು. ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದರ ಜತೆಗ ಮಹಿಳಾ ಪರ ದನಿ ಎತ್ತುವ ಕೆಲಸವನ್ನು ಸಂಘಟನೆ ಮಾಡುತ್ತಿದೆ ಎಂದು ಹೇಳಿದರು.

ಹಾಸನದಲ್ಲಿ ಅಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಶೀಘ್ರ ಜಿಲ್ಲಾ ಮಹಿಳಾ ಘಟಕದ ಕಾರ್ಯಕಾರಿಣಿ ಸಭೆ ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯ ಕನ್ನಡಪರ ಮಹಿಳಾ ಮನಸ್ಸುಗಳು, ಪದಾಧಿಕಾರಿಗಳು, ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಕರವೇ ಮಹಿಳಾ ಘಟಕದ ಹಾಸನ ಅಧ್ಯಕ್ಷೆ ನಳಿನಾ, ಅರಸೀಕೆರೆ ಅಧ್ಯಕ್ಷೆ ಕಮಲಮ್ಮ, ಚನ್ನರಾಯಪಟ್ಟಣ ಅಧ್ಯಕ್ಷೆ ದ್ರಾಕ್ಷಾಯಿಣಿ ಪದಾಧಿಕಾರಿಗಳು, ಮಹಿಳಾ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net