

ಗೋಕಾಕ: ಭಾರತದ ಮಣ್ಣು ಬರೀ ಮಣ್ಣಲ್ಲ. ಅದು ಭಾವ, ರಾಗ ಮತ್ತು ತಾಳಗಳ ಸಮ್ಮಿಲನವಾಗಿದೆ. ಹೀಗಾಗಿ, ಪ್ರತಿಯೊಬ್ಬರೂ ದೇಶದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಇತಿಹಾಸ ಚಿಂತಕ ವಿಶುಕುಮಾರ ಮಾಳಿ ಹೇಳಿದರು.
ಪಟ್ಟಣದ ಗೋಕಾಕ ಶಿಣ ಸಂಸ್ಥೆಯ ಶಿಣ ಮಹಾವಿದ್ಯಾಲಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಇತಿಹಾಸ ಮತ್ತು ಪೌರನೀತಿ ಸಂದ ಉದ್ಘಾಟನೆ ಹಾಗೂ ಬಲಿದಾನ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಲಕರಿಂದ ಹಿಡಿದು ವೃದ್ಧರವರೆಗೆ ದೇಶಕ್ಕಾಗಿ ಸಮರ್ಪಿಸಿಕೊಂಡಷ್ಟು ಬೇರಡೆ ಕಾಣಲು ಅಸಾಧ್ಯವಾಗಿದೆ. ದೇಶಕ್ಕಾಗಿ ಅರ್ಪಿಸಿಕೊಂಡ ಭಗತ್ಸಿಂಗ್, ರಾಜಗುರು ಸುಖದೇವರಂಥಹ ರಾಷ್ಟ್ರಭಕ್ತರ ಆದರ್ಶ, ಸಿದ್ಧಾಂತ ಅಳವಡಿಸಿಕೊಳ್ಳಬೇಕು ಎಂದರು.
ಗ್ರಂಥಪಾಲಕ ಬಾಲಶೇಖರ ಬಂದಿ ಮಾತನಾಡಿ, ಶಿಕ ವೃತ್ತಿ ಅತ್ಯಂತ ಪವಿತ್ರವಾದುದು. ಹೀಗಾಗಿ, ಶಿಕರಿಂದ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಸಂಪನ್ಮೂಲ ಶಿಕ ಗಣೇಶ ಉಪ್ಪಾರ, ಪ್ರಾಚಾರ್ಯ ಡಾ.ವಿರಾಜ ಮೋದಿ ಮಾತನಾಡಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರೊ.ಸುರೇಶ ಮುದ್ದಾರ ಕಾವ್ಯವಾಚನ ಮಾಡಿದರು. ಇತಿಹಾಸ ಮತ್ತು ಪೌರನೀತಿ ಸಂದ ಮುಖ್ಯಸ್ಥ ದೇವೇಂದ್ರ ಪತ್ತಾರ, ಪ್ರೊ.ವೈ.ಬಿ.ಕೊಪ್ಪದ, ಎಸ್.ಎಸ್.ಗಾಣಿಗೇರ, ಕೆ.ಜಿ. ಜಾಲಿಹಾಳ, ಸಂದ ಕಾರ್ಯದರ್ಶಿಗಳಾದ ಸಂಪತಕುಮಾರ ಮಾಳ್ಯಾಗೋಳ, ಶ್ರೀದೇವಿ ಪಾಟೀಲ ಇತರರಿದ್ದರು. ತ್ರಿವೇಣಿ ಕವಟಕೊಪ್ಪ, ಸಂಜು ಕನಮಟ್ಟಿ ನಿರೂಪಿಸಿದರು. ಲ$್ಮ ತಳವಾರ, ಶ್ರುತಿ ಶಿಂಧಿಮರದ ಪ್ರಾರ್ಥಿಸಿದರು. ಪೂಜಾ ಪಾಟೀಲ, ಸುಖದ ಕಲ್ಲೊಳ್ಳಿ ಪರಿಚಯಿಸಿದರು. ಸುಜಾತಾ ಅರಮನಿ, ದೀಪಾ ದಾಸಂಗಳಿ, ಸೌಮ್ಯ ಹಿರೇಮಠ ನಿರ್ವಹಿಸಿದರು.