ಶರಣರ ಹಾದಿಯಲ್ಲಿ ಸಾಗೋಣ

15MNL1
Published on

ಮುನವಳ್ಳಿ" ಶರಣರು ಹಾಕಿಕೊಟ್ಟ ದಾರಿಯಲ್ಲಿ ಹಡಪದ ಸಮುದಾಯ ಸಾಗಬೇಕು ಎಂದು ಸೋಮಶೇಖರಮಠದ ಮುರುಂದ್ರ ಶ್ರೀಗಳು ಹೇಳಿದರು.

ಪಟ್ಟಣದ ಬಸವಪ್ರಿಯ ಹಡಪದ ಅಪ್ಪಣ ಸಮಾಜ ಸಂದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ವಚನಗಳ ಮೂಲಕ ಸಮಾಜದ ಅಂಕು&ಡೊಂಕು ತಿದ್ದುವಲ್ಲಿ ಶಿವಶರಣ ಹಡಪದ ಅಪ್ಪಣ್ಣ ಪಾತ್ರ ದೊಡ್ಡದು. ಅವರು ವಿಶ್ವಗುರು ಬಸವಣ್ಣನ ಜತೆಗೆ ಕಾಯಕನಿಷ್ಠೆ ಮೆರೆದು ಸಮಸಮಾಜ ನಿರ್ಮಿಸುವಲ್ಲಿ ಬಹಳಷ್ಟು ಶ್ರಮಿಸಿದ್ದು, ಅಂಥ ಶರಣರ ಹಾದಿಯಲ್ಲಿ ಸಾಗಬೇಕು ಎಂದರು.

ಪಿಕೆಪಿಎಸ್​ ಅಧ್ಯ ಅಂಬರೀಷ ಯಲಿಗಾರ ಹಾಗೂ ಬಿಜೆಪಿ ಮುಖಂಡ ವಿರೂಪಾ ಮಾಮನಿ ಮಾತನಾಡಿ, ಹಡಪದ ಸಮುದಾಯ ಶ್ರಮಜೀವಿಯಾಗಿದ್ದು, ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಬೆಳ್ಳಿರಥದಲ್ಲಿ ಹಡಪದ ಅಪ್ಪಣ್ಣ ಭಾವಚಿತ್ರದ ಭವ್ಯಮೆರವಣಿಗೆ ಆರತಿ, ಪೂರ್ಣಕುಂಭ, ಮಹಿಳಾ ಡೊಳ್ಳಿನ ಮೇಳ, ವಿವಿಧ ವಾದ್ಯ ವಂದದೊಂದಿಗೆ ಸಾಗಿತು. ಮಹಾಪ್ರಸಾದ ಏರ್ಪಡಿಸಲಾಗಿತ್ತು.

ಸಂದ ಗೌರವಾಧ್ಯ ಈರಣ್ಣ ಉಜ್ಜಿನಕೊಪ್ಪ, ಅಧ್ಯ ಅಣ್ಣಪ್ಪ ಮಾಲದಿನ್ನಿ, ಉಪಾಧ್ಯ ರವಿ ಹಡಪದ, ಪ್ರಧಾನ ಕಾರ್ಯದರ್ಶಿ ಸೋಮು ಉಜ್ಜಿನಕೊಪ್ಪ, ಕಾರ್ಯದರ್ಶಿ ರವಿ ಮೂಡಲಗಿ, ಖಜಾಂಚಿ ವೀರು ಮುರನಾಳ, ಸಂಟನಾ ಕಾರ್ಯದರ್ಶಿ ಪ್ರಶಾಂತ ಉಜ್ಜಿನಕೊಪ್ಪ, ಸೋಮು

ಹಡಪದ, ಯಲ್ಲಪ್ಪ ಹಡಪದ, ಮಲ್ಲಿಕಾರ್ಜುನ ಹಡಪದ, ಶಂಕರ ಮುರನಾಳ, ಬಾಳು ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net