

ಅರಕಲಗೂಡು: ಧೂಮಪಾನ ಸೇವನೆಯಂತಹ ದುಶ್ಚಟಗಳಿಂದ ಯುವಸಮೂಹ ದೂರವುಳಿಯುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಎಸ್.ಬಿ. ಜಿನ್ನಪ್ಪ ಸಲಹೆ ನೀಡಿದರು.
ತಾಲೂಕಿನ ಬೈಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಚನಹಳ್ಳಿ ವಲಯ ಮತ್ತು ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಧೂಮಪಾನ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನರು ದುಶ್ಚಟಗಳಿಗೆ ಬಲಿಯಾದರೆ ಸಮಾಜಕ್ಕೂ ಕಂಟಕವಾಗುತ್ತಾರೆ. ಯುವಕರು ಇವುಗಳಿಂದ ದೂರ ಉಳಿದು ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಲತಾ, ಪದಾಧಿಕಾರಿ ಮೀನಾಕ್ಷಿ, ಅನುಸೂಯ, ಮಂಜುಳಾ, ಸೇವಾ ಪ್ರತಿನಿಧಿ ಮಾನಸ ಇತರರಿದ್ದರು.