ಯುವಜನಾಂಗ ಮಾನವೀಯ ಮೌಲ್ಯ ಅರಿಯಲಿ

kon (1)
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ ಇಂದು ಮಾನವೀಯ ಮೌಲ್ಯಗಳ ಅಧಃಪತನ ಎಲ್ಲ ಜನಾಂಗದಲ್ಲಿದೆ. ನಮ್ಮಲ್ಲಿ ಕೆಲವು ತಪ್ಪು ಕಲ್ಪನೆಗಳಿವೆ. ಅವನ್ನು ಹೋಗಲಾಡಿಸಿ ಸರಿದಾರಿಯಲ್ಲಿ ನಡೆಯಬೇಕು. ಗಾಯತ್ರಿ ಮಂತ್ರಕ್ಕೆ ಪ್ರಬಲ ಶಕ್ತಿಯಿದ್ದು, ಯುವಜನಾಂಗ ಇದನ್ನು ಅರಿಯಬೇಕು ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಹೇಳಿದರು. ಮಂದಾರ್ತಿಯಲ್ಲಿ ಆಯೋಜಿಸಲಾದ ಮಂದಾರ್ತಿ ವಲಯ ಬ್ರಾಹ್ಮಣ ಮಹಾಸಭಾ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಟಿ.ವಿಶ್ವನಾಥ ಬಾಯರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಅಭಿಷೇಕ್ ಭಟ್, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪೂರ್ಣಚಂದ್ರ ಉಡುಪ, ವಾಣಿಜ್ಯ ವಿಭಾಗದ ಅಂಬಿಕಾ ನಕ್ಷತ್ರಿ ಅವರನ್ನು ಪುರಸ್ಕರಿಸಲಾಯಿತು. ವೇದಾಧ್ಯಯನ ಮಾಡುತ್ತಿರುವ ಸಾತ್ವಿಕ್ ಉಡುಪ ಮತ್ತು ಜಿಲ್ಲಾ ಯುವ ಬ್ರಾಹ್ಮಣ ಕ್ರೀಡೋತ್ಸವದಲ್ಲಿ ಪ್ರಥಮ ಬಹುಮಾನ ಪಡೆದ ವಿಪ್ರ ಮಹಿಳಾ ತಂಡದವರಿಗೆ ವಿಶೇಷ ದತ್ತಿನಿಧಿಯಿಂದ ಪ್ರೋತ್ಸಾಹಧನ ನೀಡಲಾಯಿತು. ಮುಂದಿನ ವರ್ಷದ ಕಾರ್ಯಾಧ್ಯಕ್ಷರಾಗಿ ಮಂದಾರ್ತಿ ನರಸಿಂಹ ಅಡಿಗ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಉಡುಪ, ಖಜಾಂಚಿಯಾಗಿ ಸದಾಶಿವ ಉಡುಪ ಅವರನ್ನು ಆಯ್ಕೆ ಮಾಡಲಾಯಿತು. ನಯನಾ ಶರ್ಮ ಸ್ವಾಗತಿಸಿದರು. ರಾಮಚಂದ್ರ ಉಡುಪ ವರದಿ ವಾಚಿಸಿದರು. ರಾಘವೇಂದ್ರ ಉಡುಪ ವಂದಿಸಿದರು. ಗಣೇಶ ಅಡಿಗ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net