

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ದೇಶದ ವಾಣಿಜ್ಯ ಬ್ಯಾಂಕ್‌ಗಳ ತವರೂರಾಗಿದ್ದ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಸಹಕಾರ ಸಂ, ಬ್ಯಾಂಕ್‌ಗಳು ಜನರ ಅಭಿವದ್ಧಿಗೆ ಇರುವ ಏಕೈಕ ಸಹಕಾರಿ ಸಂಸ್ಥೆಗಳಾಗಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುವಾರ್ ಅಭಿಪ್ರಾಯಟ್ಟರು. ಪಡುಬಿದ್ರಿ ಬಂಟರ ಸಂ, ಬಂಟ್ಸ್ ವೆಲ್ಪೇರ್ ಟ್ರಸ್ಟ್ ಹಾಗೂ ಸಿರಿಮುಡಿ ದತ್ತಿನಿಧಿ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಸಹಭಾಗಿತ್ವದಲ್ಲಿ ಸದಾನಂದ ಕುಡ್ಡು ಶೆಟ್ಟಿ ಹವಾನಿಯಂತ್ರಿತ ಸ್ವಂತ ಕಟ್ಟಡದಲ್ಲಿ ಸ್ಥಾಪಿಸಿರುವ ಸಿರಿಮುಡಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯನ್ನು ಭಾನುವಾರ ಉದ್ಘಾಟಿಸಿ ವಾತನಾಡಿದರು. ಸರಳೀಕತವಾಗಿ ತ್ವರಿತವಾಗಿ ಜನರಿಗೆ ಸಾಲ ನೀಡುವಂತಹ ವ್ಯವಸ್ಥೆಯುಳ್ಳ ಸಂಸ್ಥೆಯೇ ಸಹಕಾರಿ ಸಂಸ್ಥೆ. ಇಲ್ಲಿನ ಸೊಸೈಟಿ ಕಟ್ಟಡಕ್ಕೆ 10 ಲಕ್ಷ, ಬಂಟರ ಸಂಕ್ಕೆ ಲ್‌ಟಿ ಅಳವಡಿಕೆಗೆ 10 ಲಕ್ಷ ಹಾಗೂ ಬಂಟಾಶ್ರಯ ಕುಟುಂಬ ಸೇವಾಶ್ರಮಕ್ಕೆ ಸಹಕಾರ ನೀಡುವುದಾಗಿ ಎಂ.ಎನ್. ರಾಜೇಂದ್ರ ಕುವಾರ್ ಭರವಸೆ ನೀಡಿದರು. ಸಿರಿಮುಡಿ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಆರ್‌ಜಿ.ಗ್ರೂಪ್‌ನ ಆಡಳಿತ ನಿರ್ದೇಶಕ ಕೆ.ಪ್ರಕಾಶ್ ಶೆಟ್ಟಿ, ಬಂಟರ ಸಂದ ದಿಗ್ಗಜರೆಲ್ಲ ಸಹಕಾರದೊಂದಿಗೆ ಮುಂದಿನ ಮೂರು ವರ್ಷದಲ್ಲಿ ಬ್ಯಾಂಕ್‌ನ ಠೇವಣಿಯನ್ನು 131 ಕೋಟಿ ರೂ.ಗೆ ಏರಿಸುವ ಪ್ರಯತ್ನ ಸಂದ ಅಧ್ಯಕ್ಷರಿಂದಾಗಲಿ. ವಿಜಯ ಬ್ಯಾಂಕ್ ಸ್ಥಾಪಕ ಮೂಲ್ಕಿ ಸುಂದರಾಮ್ ಶೆಟ್ಟಿ ಹೆಸರಿನಲ್ಲಿ ಆರಂಭಿಸಿರುವ ಟ್ರಸ್ಟ್ ಮೂಲಕ ಅವರ ಸ್ಮಾರಕ ಭವನದಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ಕಾಪು, ಪಡುಬಿದ್ರಿ ಹಾಗೂ ಮೂಲ್ಕಿ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ನೀಡುವ ಯೋಜನೆ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು. ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಡಾ.ವೈ.ಎನ್.ಶೆಟ್ಟಿ, ಬಂಟರ ಸಂ ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಸೊಸೈಟಿ ಉಪಾಧ್ಯಕ್ಷ ಶ್ರೀನಾಥ್ ಹೆಗ್ಡೆ, ನಿರ್ದೇಶಕರಾದ ಶಶಿಧರ್ ಶೆಟ್ಟಿ, ರವೀಂದ್ರನಾಥ್ ಜಿ. ಹೆಗ್ಡೆ, ಸುರೇಶ್ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ ಪಲ್ಲವಿ, ವಾಧದ ಸಿ.ಶೆಟ್ಟಿ, ಸಂತಪ್ತಿ ಎಂ.ಶೆಟ್ಟಿ, ಶೋಭಾ ಜೆ. ಶೆಟ್ಟಿ, ಸಿಇಒ ಅಂಕಿತ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಸುಜಿತ್ ಶೆಟ್ಟಿ ಉಪಸ್ಥಿತರಿದ್ದರು. ಬಂಟರ ಸಂದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಸ್ತಾವನೆಗೈದರು. ಸಿರಿಮುಡಿ ದತ್ತಿ ನಿಧಿ ಸಂಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಬಂಟರ ಸಂದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು. ಸಂಟನಾ ಸಮಿತಿ ಸಂಚಾಲಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸಾಂಸ್ಕೃತಿಕ ವಿಭಾಗದ ಜಯ ಶೆಟ್ಟಿ ಪದ್ರ, ವಿದಿಶಾ ಹರೀಶ್ ಶೆಟ್ಟಿ ನಿರೂಪಿಸಿದರು.
ಸದಾನಂದ ಕೆ.ಶೆಟ್ಟಿ ಸದಾನಂದ ಕುಡ್ಡು ಶೆಟ್ಟಿ ಸಂಕೀರ್ಣವನ್ನು ಉದ್ಘಾಟಿಸಿದರು. ಹೇರಂಭ ಗ್ರೂಪ್‌ನ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಸಿರಿಮುಡಿ ಉಳಿತಾಯ ಖಾತೆಯ ಪಾಸ್ ಪುಸ್ತಕ, ವಿ.ಕೆ.ಗ್ರೂಪ್‌ನ ಆಡಳಿತ ನಿರ್ದೇಶಕ ಕೆ.ಎಂ.ಶೆಟ್ಟಿ ನಿರಖು ಠೇವಣಿ ಪತ್ರ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುಣೆ ಬಂಟರ ಸಂದ ಅಧ್ಯಕ್ಷ ಅಜಿತ್ ಹೆಗ್ಡೆ ಸವಲತ್ತುಗಳನ್ನು ವಿತರಿಸಿದರು. ಕೆ.ಪ್ರಕಾಶ್ ಶೆಟ್ಟಿ ಪಡುಬಿದ್ರಿ ಬಂಟರ ವಾಹಿತಿ ಕೈಪಿಡಿ ಬಿಡುಗಡೆಗೊಳಿಸಿದರು. 2026ರ ಜನವರಿಯಲ್ಲಿ ಪಡುಬಿದ್ರಿ ಬಂಟರ ಸಂದ ಸಾಂಸ್ಕೃತಿಕ ವಿಭಾಗದಿಂದ ಆಯೋಜಿಸುವ ರಾಷ್ಟ್ರೀಯ ಬಂಟರ ಕಲೋತ್ಸವ 2026 ಸಾಂಸ್ಕೃತಿಕ ಸ್ಪರ್ಧೆಯ ವಾಹಿತಿ ಕರಪತ್ರ ಬಿಡುಗಡೆಗೊಳಿಸಲಾಯಿತು. ಪಡುಬಿದ್ರಿ ಬಂಟರ ಸಂದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಿಧವೆಯರಿಗೆ, ಅಂಗವಿಕಲರಿಗೆ, ಅಶಕ್ತರಿಗೆ, ಅನಾರೋಗ್ಯಸ್ಥರಿಗೆ ಸಹಾಯಧನ ವಿತರಣೆ, ದಾನಿಗಳಿಗೆ ಸನ್ಮಾನ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ, ಸಿರಿಮುಡಿ ದತ್ತಿ ನಿಧಿ ವಿತರಣೆ ನಡೆಯಿತು.
2019ರಲ್ಲಿ ನಡೆದ ಪ್ರಕಾಶಾಭಿನಂದನಾ ಕಾರ್ಯಕ್ರಮದ ಸಂಕಲ್ಪದಂತೆ ಆರಂಭಿಸಿದ 1.5 ಕೋಟಿ ರೂ. ಸಹಾಯಹಸ್ತವನ್ನು ಮೂರು ಸಹಸ್ರ ಲಾನುಭವಿಗಳಿಗೆ ವಿತರಿಸಿದ್ದು, ಪ್ರಸ್ತುತ 7.5 ಕೋಟಿ ರೂ.ಮೊತ್ತಕ್ಕೆ ತಲುಪಿದೆ. ಡಿ.25ರಂದು 10 ಕೋಟಿ ರೂ. ಸಹಾಯಹಸ್ತ ನೀಡಲಾಗುವುದು. ಸಂಪಾದನೆ ಒಂದಂಶವನ್ನು ಸವಾಜಕ್ಕೆ ನೀಡುವ ಮೂಲಕ ಸಾಮಾಜಿಕ ಕಾರ್ಯವೂ ನಡೆಯಬೇಕು. -ಕೆ.ಪ್ರಕಾಶ್ ಶೆಟ್ಟಿ, ಎಂಆರ್‌ಜಿ.ಗ್ರೂಪ್ ಆಡಳಿತ ನಿರ್ದೇಶಕ.