ಯುವಕರು ಧೈರ್ಯಶಾಲಿಗಳಾಗಲಿ

ಹನುಮಸಾಗರ ಸಮೀಪದ ಮದ್ನಾಳಯಲ್ಲಿ ಶುಕ್ರವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲಾಯಿತು. ಗ್ರಾಪಂ ಸದಸ್ಯರಾದ ಚಿದಾನಂದಪ್ಪ ಹೂಗಾರ, ಬಂಗಾರಪ್ಪ ಪೂಜಾರ, ದೇವೇಂದ್ರಪ್ಪ ಕಾರಿ, ರಾಯಣ್ಣ ಯುವ ಪಡೆ ಸ್ಥಳೀಯ ಅಧ್ಯಕ್ಷ ಯಮನೂರ ಗುರಿಕಾರ, ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಹಟ್ಟಿ, ಉಪಾಧ್ಯಕ್ಷ ಅಂಬರೀಶ ತಳವಾರ, ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ವಿನಾಯಕ ಮದ್ನಾಳ ಇತರರಿದ್ದರು.

Published on

ಹನುಮಸಾಗರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದಿಟ್ಟ ತನದಿಂದ ಹೋರಾಟ ಮಾಡಿ ಬ್ರಿಟಿಷ್ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟುವಂತೆ ಮಾಡಿದ್ದರು ಎಂದು ರಾಯಣ್ಣ ಯುವ ಪಡೆ ಸ್ಥಳೀಯ ಅಧ್ಯಕ್ಷ ಯಮನೂರ ಗುರಿಕಾರ ಹೇಳಿದರು.

ಸಮೀಪದ ಮದ್ನಾಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ಜಯಂತಿಯಲ್ಲಿ ಮಾತನಾಡಿದರು. ಇಂದಿನ ಯುವ ಪೀಳಿಗೆ ಸಂಗೊಳ್ಳಿ ರಾಯಣ್ಣನಂತೆ ಧೈರ್ಯಶಾಲಿಗಳಾಗಬೇಕು. ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ಬ್ರಿಟಿಷರನ್ನು ಭಾರತದಿಂದ ಓಡಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ರಾಯಣ್ಣ ಕೆಚ್ಚೆದೆಯಿಂದ ಹೋರಾಡಿ ಪ್ರಾಣ ತ್ಯಾಗ ಮಾಡಿದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಗ್ರಾಪಂ ಸದಸ್ಯರಾದ ಚಿದಾನಂದಪ್ಪ ಹೂಗಾರ, ಬಂಗಾರಪ್ಪ ಪೂಜಾರ, ದೇವೇಂದ್ರಪ್ಪ ಕಾರಿ, ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಹಟ್ಟಿ, ಉಪಾಧ್ಯಕ್ಷ ಅಂಬರೀಶ ತಳವಾರ, ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಅಧ್ಯಕ್ಷ ವಿನಾಯಕ ಮದ್ನಾಳ, ಮುಖಂಡರಾದ ನೀಲಪ್ಪ ಹಟ್ಟಿ, ಚಂದಪ್ಪ ಕೊಪ್ಪಳ, ಈರಣ್ಣ ಹೂಗಾರ, ನಿಂಗಪ್ಪ ಕೋನಾಪುರ, ಹುಲ್ಲಪ್ಪ, ರಾಮಣ್ಣ ಗುರಿಕಾರ, ದ್ಯಾಮನಗೌಡ ಮಾಲಿಪಾಟೀಲ್, ಶಿವನಗೌಡ ಪೊಲೀಸ್ ಪಾಟೀಲ್, ಮೈಲಾರಪ್ಪ ಹಟ್ಟಿ, ಅರ್ಜುನ್ ಹಟ್ಟಿ, ಹನಮಂತ ಹಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net