ಸಂಗೊಳ್ಳಿ ರಾಯಣ್ಣ ಜಯಂತಿ, ಸ್ವಾತಂತ್ರೃದಿನ ಆಚರಣೆ

ಸಂಗೊಳ್ಳಿ ರಾಯಣ್ಣ ಜಯಂತಿ, ಸ್ವಾತಂತ್ರೃದಿನ ಆಚರಣೆ
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಪಟ್ಟಣದ ಕನಕ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಸಂಗೊಳ್ಳಿರಾಯಣ್ಣ ಜಯಂತಿ ಹಾಗೂ ಸ್ವಾತಂತ್ರೃದಿನವನ್ನು ಗುರುವಾರ ಆಚರಿಸಲಾಯಿತು.

ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ಜಯಣ್ಣ ಮಾತನಾಡಿ, ಮಹಾನ್ ದೇಶಭಕ್ತ, ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಜಯಂತಿಯನ್ನು ಅರ್ಥಗರ್ಭಿತವಾಗಿ ಮುಂದಿನ ಪೀಳಿಗೆಗೆ ಸಂದೇಶ ನೀಡುವ ರೀತಿಯಾಗಿ ಆಚರಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ಬಿ.ಜೆ ಭಾಸ್ಕರ್, ಸದಸ್ಯ ಬಿ.ಸಿ. ಶ್ರೀನಿವಾಸ್, ಪೇಟೆ ವಿಶ್ವನಾಥ್, ಸರ್ವೆ ಕೊಪ್ಪಲು ಮಂಜಣ್ಣ, ಕೆ.ಕೆ. ಆರಿಫ್ ಜಾನ್, ಇಮ್ರಾನ್, ಬಿ.ಆರ್.ಜಯಣ್ಣ, ಪಟೇಲ್ ಚೇತನ್, ಶ್ರೀಧರ್, ಬಿ.ಇ.ಹರೀಶ್, ಜಯಕುಮಾರ್,ಪರಮೇಶ್, ಶಶಿಕುಮಾರ್, ಆಟೋ ಕಿಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net