ಯುವ ಪೀಳಿಗೆಗೆ ಸಿದ್ಧಾಂತ ತಿಳಿಸಲಿ

14mdlg2
Published on

ಮೂಡಲಗಿ: ದಲಿತರು ಬಾಬಾಸಾಹೇಬರ ಜಯಂತಿ ಆಚರಿಸುವುದರ ಜತೆಗೆ ಅವರ ಕೊಡುಗೆ, ತತ್ತ್ವ ಹಾಗೂ ಸಿದ್ಧಾಂತಗಳನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಪ್ರೊ.ವೈ.ಎಸ್​.ಚಲವಾದಿ ಹೇಳಿದರು.

ಪಟ್ಟಣದ ಶ್ರೀ ಶ್ರೀಪಾದಭೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ತಾಲೂಕಾಡಳಿತ, ತಾಪಂ, ಪುರಸಭೆ, ಸ್ಥಳಿಯ ಸಂಸ್ಥೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್​. ಅಂಬೇಡ್ಕರ್​ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಹಸೀಲ್ದಾರ್​ ಶಿವಾನಂದ ಬಬಲಿ, ಬಿಇಒ ಅಜಿತ್​ ಮನ್ನಿಕೇರಿ ಮಾತನಾಡಿ, ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ಡಾ.ಬಿ.ಆರ್​.ಅಂಬೇಡ್ಕರ್​ ಬದುಕು ಎಲ್ಲರಿಗೂ ದಾರಿದೀಪವಾಗಿದೆ ಎಂದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್​ ಭಾವಚಿತ್ರ ಮೆರವಣಿಗೆ ಸಂಚರಿಸಿತು. ತಾಪಂ ಎ್​.ಜಿ.ಚಿನ್ನನವರ, ಸಿಪಿಐ ಶ್ರೀಶೈಲ ಬ್ಯಾಕೂಡ, ಮುಖ್ಯಾಧಿಕಾರಿ ತುಕಾರಾಮ ಮಾದರ, ಹೆಸ್ಕಾಂ ಅಧಿಕಾರಿ ಎಂ.ಎಸ್​. ನಾಗನ್ನವರ, ಸಿಡಿಪಿಒ ಯಲ್ಲಪ್ಪ ಗದಾಡಿ, ಎಂ.ಎಸ್​.ಪಾಟೀಲ, ಪ್ರಾಚಾರ್ಯ ಮಹೇಶ ಕಂಬಾರ, ಯಲ್ಲಪ್ಪ ಭಂಜತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net