ಕಾಂಗ್ರೆಸ್ ಟಿಕೆಟ್ ಬಣಕಾರರೇ ಬಿಟ್ಟು ಕೊಡಲಿ

Bannikoda talking about congress ticket in meeting
Published on

ರಟ್ಟಿಹಳ್ಳಿ: ಯು.ಬಿ. ಬಣಕಾರ ಅವರಿಗೆ ಇನ್ನೂ ವಯಸ್ಸಿದ್ದು, ಅವರೇ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದು ವಿಧಾನಸಭೆ ಚುನಾವಣೆಗೆ ಟಿಕೆಟ್ ನನಗೆ ಕೊಡಿಸಬೇಕು ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.

ತಾಲೂಕಿನ ಖಂಡೇಬಾಗೂರು ಗ್ರಾಮದಲ್ಲಿ ಆಯೋಜಿಸಿದ್ದ ಬೆಂಬಲಿಗರ ಮತ್ತು ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು. ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಗೆ ಹಲವಾರು ವರ್ಷಗಳಿಂದ ಶ್ರಮಿಸಿದ್ದೇನೆ ಎಂದರು.
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಯು.ಬಿ. ಬಣಕಾರ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಈಗಾಗಲೇ ನನ್ನ ವಯಸ್ಸು 82. ಬಹುಶಃ ಇದೇ ಕೊನೆಯ ಚುನಾವಣೆ ಎಂದರು.
ಅನೇಕ ಚುನಾವಣೆಯಲ್ಲಿ ವರಿಷ್ಠರ ನಿರ್ದೇಶನದಂತೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಬಾರಿ ಟಿಕೆಟ್ ವಿಶ್ವಾಸ ಇತ್ತು. ಆದರೆ, ಟಿಕೆಟ್ ಕೈ ತಪ್ಪಿದ್ದು ಬೇಸರ ಮೂಡಿಸಿದೆ ಎಂದರು.

ಘೋಷಿತ ಅಭ್ಯರ್ಥಿ ಏ. 13ರೊಳಗಾಗಿ ವಿಶಾಲ ಮನೋಭಾವದಿಂದ ಟಿಕೆಟ್ ನನಗೆ ನೀಡುವಂತೆ ವರಿಷ್ಠರ ಗಮನಕ್ಕೆ ತರಬೇಕು. ಈ ಬಗ್ಗೆ ಪಕ್ಷ ಅಂತಿಮ ನಿರ್ಣಯ ತೆಗೆದುಕೊಳ್ಳದೇ ಇದ್ದಲ್ಲಿ ಏ. 13ರಂದು ಮತ್ತೆ ಬೆಂಬಲಿಗರ ಸಭೆ ನಡೆಸಿ ಮುಂದಿನ ಅಂತಿಮ ರಾಜಕೀಯ ನಿರ್ಣಯ ತಿಳಿಸಲಾಗುವುದು ಎಂದು ಬಿ.ಎಚ್. ಬನ್ನಿಕೋಡ ಹೇಳಿದರು.
ಪಕ್ಷದ ಹಿರಿಯ ಎ.ಕೆ. ಪಾಟೀಲ, ಜಿಪಂ ಮಾಜಿ ಸದಸ್ಯ ಪ್ರಕಾಶ ಬನ್ನಿಕೋಡ, ಹನುಮಂತಪ್ಪ ಹಡಗದ, ಸುರೇಶಗೌಡ ಸೊರಟೂರು, ಕೆ.ಆರ್. ಪಾಟೀಲ, ಬಸಪ್ಪ ಕುರಿಯವರ, ಎಲ್.ಸಿ. ಕೊರಚರ, ಎ.ಎ. ಕನವಳ್ಳಿ, ಸರ್ಪರಾಜ ಮಾಸೂರು, ಶೇಖಣ್ಣ ಉಕ್ಕುಂದ, ನಾಸೀರಖಾನ್ ಸೈಕಲ್ಗಾರ, ರಾಜಣ್ಣ ಪಾಟೀಲ, ನಿಂಗಪ್ಪ ಕಡೂರು, ಮಲ್ಲನಗೌಡ ಕೆರೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net