ವಿದ್ಯಾರ್ಥಿಗಳು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ

ವಿದ್ಯಾರ್ಥಿಗಳು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ
Published on

ತಿ.ನರಸೀಪುರ: ಶೋಷಿತ ಹಾಗೂ ಹಿಂದುಳಿದ ವರ್ಗದವರ ಮಕ್ಕಳು ಉನ್ನತ ವ್ಯಾಸಂಗದಿಂದ ವಂಚಿತರಾಗಬಾರದೆಂದು ಪಟ್ಟಣದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ಆರಂಭಿಸಲಾಯಿತು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದರು.

ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 5 ಕೋಟಿ ರೂ. ವೆಚ್ಚದ 13 ಕೊಠಡಿಗಳ ನಿರ್ಮಾಣ ಹಾಗೂ ತಲಕಾಡಿನ ಪ್ರಥಮ ದರ್ಜೆ ಕಾಲೇಜು ಕೊಠಡಿ ಕಟ್ಟಡ ನಿರ್ಮಾಣಕ್ಕೆ 5.5 ಕೋಟಿ ರೂ. ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಬಡವರ್ಗದ ಮಕ್ಕಳು ದೂರದ ಪಟ್ಟಣಗಳಿಗೆ ಉನ್ನತ ಶಿಕ್ಷಣಕ್ಕೆ ಹೋಗುವುದು ಕಷ್ಟವಾದ ಹಿನ್ನೆಲೆಯಲ್ಲಿ ಇಲ್ಲಿ ಉನ್ನತ ಶಿಕ್ಷಣ ಕಾಲೇಜಿಗೆ ಅತಿ ಹೆಚ್ಚು ಅನುದಾನ ನೀಡಿ ಪ್ರಾರಂಭ ಮಾಡಿಸಿದ್ದೇನೆ. ಕಾಲೇಜು ಪ್ರಾರಂಭವಾದ ನಂತರ ಇಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಸೌಲಭ್ಯ ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕೆಡಿಪಿ ಸದಸ್ಯ ಸುನೀಲ್ ಬೋಸ್, ತಾ.ಪಂ. ನಿಕಟ ಪೂರ್ವ ಅಧ್ಯಕ್ಷ ಹ್ಯಾಕನೂರು ಉಮೇಶ್, ಪುರಸಭೆ ಮಾಜಿ ಅಧ್ಯಕ್ಷ ಎಸ್. ಮದನ್ ರಾಜ್, ತಾ.ಪಂ.ಮಾಜಿ ಸದಸ್ಯ ಕುಕ್ಕೂರು ಗಣೇಶ್, ರಾಮಲಿಂಗಯ್ಯ, ತಲಕಾಡು ನರಸಿಂಹ ಮಾದನಾಯಕ, ಬಸವಣ್ಣ, ಲಕ್ಷ್ಮಣ, ಬಸವರಾಜು, ತಹಸೀಲ್ದಾರ್ ಸುರೇಶಾಚಾರ್, ಪ್ರಾಂಶುಪಾಲ ಉದಯಕುಮಾರ್, ಡಾ.ವಸಂತರಾಜು, ಪ್ರೊ. ವಿಜಯಲಕ್ಷ್ಮೀ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net