ಷೇರುದಾರರು ಆಡಳಿತ ಮಂಡಳಿಗೆ ಸಹಕರಿಸಲಿ

ಕನಕಗಿರಿಯ ಪ್ರಾಕೃಪಸ ಸಂಘದ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ.ಕನಕಪ್ಪ ಛಲವಾದಿ ಮಾತನಾಡಿದರು. ನಿರ್ದೇಶಕರಾದ ಅಮರೇಶ ಬಾವಿಕಟ್ಟಿ, ರಾಘವೇಂದ್ರ, ವನಜಾಕ್ಷಿ ಇತರರಿದ್ದರು.
ಕನಕಗಿರಿಯ ಪ್ರಾಕೃಪಸ ಸಂಘದ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ.ಕನಕಪ್ಪ ಛಲವಾದಿ ಮಾತನಾಡಿದರು. ನಿರ್ದೇಶಕರಾದ ಅಮರೇಶ ಬಾವಿಕಟ್ಟಿ, ರಾಘವೇಂದ್ರ, ವನಜಾಕ್ಷಿ ಇತರರಿದ್ದರು.
Published on

ಕನಕಗಿರಿ: ರೈತರ ಅನುಕೂಲಕ್ಕಾಗಿ ರಚನೆಯಾದ ಪ್ರಾಕೃಪಸ ಸಂಘಗಳಿಗೆ ಆಡಳಿತ ಮಂಡಳಿ ಸದಸ್ಯರ ಜತೆಗೆ ಷೇರುದಾರರು ಸಹಕರಿಸಿದರೆ ಸಂಘಗಳು ರಾಜ್ಯ ಮಟ್ಟದಲ್ಲಿ ಹೆಸರು ಮಾಡಲಿವೆ ಎಂದು ಪ್ರಾಥಮಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಕನಕಪ್ಪ ಛಲವಾದಿ ಹೇಳಿದರು.

ನಗರದ ವೆಂಕಟೇಶ್ವರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಾಕೃಪಸ ಸಂಘದ 2024-29 ನೇ ಸಾಲಿನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದಿನ ಸದಸ್ಯರು ಸಂಘದ ಅಭಿವೃದ್ಧಿಗೆ ಬುನಾದಿ ಹಾಕಿದ್ದು, ಅದರ ತಳಹದಿ ಮೇಲೆ ಹಿಂದಿನ ಎರಡು ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ರೈತರಿಗೆ, ಷೇರುದಾರರಿಗೆ ಸರ್ಕಾರ ಹಾಗೂ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲಾಗಿದೆ. ಈಗ ಮೂರನೇ ಬಾರಿ ಅಧ್ಯಕ್ಷನಾಗಿ ಪದಗ್ರಹಣ ಮಾಡಿದ್ದು, ಷೇರುದಾರರು, ಸಿಬ್ಬಂದಿ, ರೈತರು ಹಾಗೂ ಆಡಳಿತ ಮಂಡಳಿ ಸಹಕಾರ ನೀಡಿದರೆ ಸಂಘವನ್ನು ರಾಜ್ಯ ಮಟ್ಟದಲ್ಲಿ ಬೆಳೆಸಬಹುದು ಎಂದರು.

ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯ ಸುರೇಶ ಗುಗ್ಗಳಶೆಟ್ರ, ಸಹಕಾರಿ ಸಂಘದ ಉಪಾಧ್ಯಕ್ಷ ಮಹಾಂತೇಶ ಕೊಡ್ಲಿ, ನಿರ್ದೇಶಕರಾದ ಕನಕರೆಡ್ಡಿ ಕೆರಿ, ಅಮರೇಶ ಬಾವಿಕಟ್ಟಿ, ದುರುಗೇಶ, ಸಿಂಧೂ ಬಲ್ಲಾಳ, ರಾಘವೇಂದ್ರ ಚಿತ್ರಗಾರ, ಶರಣಬಸಪ್ಪ ಕಲಕೇರಿ, ವನಜಾಕ್ಷಿ, ಶರಣಮ್ಮ ಸಜ್ಜನ್, ಸಣ್ಣ ರಾಮಣ್ಣ ಬ್ಯಾಳಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಸಜ್ಜನ್, ಕೆಟಿಸಿ ಅಧ್ಯಕ್ಷ ಸದಾನಂದ ಸಮಗಂಡಿ, ಉಪಾಧ್ಯಕ್ಷ ಬಿ.ವಿ.ಜೋಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net