ಸೋಲೂರು ಉಳಿಸಿಕೊಳ್ಳಲು ಜನ ಬೀದಿಗಿಳಿಯಲಿ

mgd
Published on

ಹೋಬಳಿಯವರ ಸಪೋರ್ಟ್​ ಇಲ್ಲದಿದ್ದರೇ ಪ್ರಯೋಜನ ಇಲ್ಲವೆಂದ ಶಾಸಕ ಬಾಲಕೃಷ್ಣ

ಮಾಗಡಿ: ಸೋಲೂರು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸಿಕೊಳ್ಳಲು ಹಲವು ಹೋರಾಟಗಳು ನಡೆದರೂ ದೂರವೇ ಇರುವ ಶಾಸಕ ಬಾಲಕೃಷ್ಣ, ಮತ್ತದೇ "ಜನ ಬೀದಿಗಿಳಿದ್ರೆ' ಬೆಂಬಲ ನೀಡುವುದಾಗಿ ಪುನರುಚ್ಚರಿಸಿದರು.

ತಾಲೂಕಿನ ಬೆಳಗುಂಬ ಗ್ರಾ.ಪಂ. ವ್ಯಾಪ್ತಿಯಲ್ಲಿ ಶುಕ್ರವಾರ 15 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೆಳಗುಂಬ ಗ್ರಾ.ಪಂ. ವ್ಯಾಪ್ತಿಯ ಭಂಟರಕುಪ್ಪೆ, ಭಂಟರ ಕುಪ್ಪೆ ಕಾಲನಿ, ತೋರೆಚೇನಹಳ್ಳಿ, ಮಾದಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಅರಸನಕುಂಟೆ, ತಗ್ಗಿಕುಪ್ಪೆ ಗ್ರಾಪಂನ ಸಿದ್ದಯ್ಯನಪಾಳ್ಯ, ಯಾಗನಹಳ್ಳಿಯವರು ತಮ್ಮನ್ನು ಮಾಗಡಿಯಲ್ಲೇ ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಗ್ರಾಮಗಳನ್ನು ಮಾಗಡಿಯಲ್ಲೇ ಉಳಿಸಿಕೊಳ್ಳಲಾಗುವುದು. ಹೀಗೆ ಸೋಲೂರು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸಿಕೊಳ್ಳಬೇಕು ಎಂದು ಸೋಲೂರಿನ ಜನರಿಂದ ಕೂಗು ಬರಬೇಕು. ಅವರಿಂದ ಮನವಿ ಬಂದರೆ ಸ್ಪಂದಿಸುವೆ. ಅವರಿಂದ ಕೂಗು ಬಾರದಿದ್ದರೆ ಮಾಗಡಿಯವರು ಕೂಗಾಡಿಕೊಂಡರೆ ಏನೂ ಪ್ರಯೋಜನವಿಲ್ಲ. ಹೋಬಳಿ ಜನ ನಮ್ಮನ್ನು ಸಪೋರ್ಟ್​ ಮಾಡದಿದ್ರೆ ನಾವೇನೂ ಮಾಡಲಾಗದು ಎಂದ ಬಾಲಕೃಷ್ಣ, ಹೋಬಳಿ ಮುಖಂಡರೇ ನೆಲಮಂಗಲಕ್ಕೆ ಹೋಗುವುದಾಗಿ ಹೇಳುವಾಗ ನಾನೇಕೆ ವಿರೋಧ ಮಾಡಲಿ ? ಹೋಬಳಿಯ ಮಠಾಧ್ಯಕ್ಷರು ಸೇರಿ ಪ್ರತಿಭಟಿಸಿದರೆ ಮಾಗಡಿಯಲ್ಲಿ ಉಳಿಯುವುದು ಅವಶ್ಯಕತೆ ಇದೆಯೋ ? ಇಲ್ಲವೋ ? ಎಂಬುದು ಗೊತ್ತಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

ಜೆಜೆಎಂ ಮೊದಲ ಹಂತದ ಕಾಮಗಾರಿ ವೇಳೆ ಓವರ್​ಹೆಡ್​ ಟ್ಯಾಂಕ್​ ನಿರ್ಮಿಸದೆ ಪೈಪ್​ಲೈನ್​ ಕಾಮಗಾರಿ ನಿರ್ಮಿಸಿದ ಗುತ್ತಿಗೆದಾರರು ಬಿಲ್​ಪಡೆದು ನಾಪತ್ತೆಯಾಗಿದ್ದರು. ನಾನು ಬಂದ ನಂತರ ಗುತ್ತಿಗೆದಾರರನ್ನು ಕರೆಸಿ ಓವರ್​ ಹೆಡ್​ ಟ್ಯಾಂಕ್​ ಕಟ್ಟಿಸಲಾಗುತ್ತಿದೆ. ಮೊದಲನೆ ಹಂತದ ಕಾಮಗಾರಿ ಬರೀ ಶೇ.50ರಷ್ಟು ಮುಗಿದಿತ್ತು. 3ನೇ ಹಂತದಲ್ಲಿ 80ರಿಂದ 90ರಷ್ಟು ಕಾಮಗಾರಿ ನಿರ್ವಹಿಸಲಾಗಿದೆ ಎಂದು ಬಾಲಕೃಷ್ಣ ತಿಳಿಸಿದರು.

ಗ್ರಾಪಂ ಸದಸ್ಯರಾದ ಬೈರಪ್ಪ, ಕೋಟಪ್ಪ, ವಿಶ್ವನಾಥ್​, ಸುರೇಶ್​, ರಾಧಿಕಾ ರಾಜಣ್ಣ, ಉಮಾ ನರಸಿಂಹಮೂರ್ತಿ, ನರಸಯ್ಯ, ಶಿವಕುಮಾರ್​, ಬೆಳಗುಂಬ ನರಸಿಂಹಯ್ಯ, ತಾಪಂ ಮಾಜಿ ಉಪಾಧ್ಯಕ್ಷ ನಾಗರಾಜು, ಚಿಕ್ಕರೇವಯ್ಯ, ಪುಟ್ಟರಾಜು, ಜಯರಾಮು, ರೇಣುಕಪ್ಪ, ಾರೆಸ್ಟ್​ ಚೈತ್ರಾ, ಶಿಕ್ಷಕ ಗುಣಶೇಖರ್​ ಇದ್ದರು.

ತಿಪ್ಪಸಂದ್ರ&ಕುದೂರು ಹೋಬಳಿಗೂ ನೀರುಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಮಂಚನಬೆಲೆ&ವೈಜಿಗುಡ್ಡ ಜಲಾಶಯದಿಂದ ಮಾಡಬಾಳ್​, ಸೋಲೂರು ಹೋಬಳಿ ವ್ಯಾಪ್ತಿಯಲ್ಲಿ ಮನೆಮನೆಗೂ ಶುದ್ಧಕುಡಿಯುವ ನೀರು ಒದಗಿಸಲಾಗುತ್ತಿದೆ. ತಿಪ್ಪಸಂದ್ರ&ಕುದೂರು ಹೋಬಳಿ ವ್ಯಾಪ್ತಿಯ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಬೇರೆಡೆಯಿಂದ ನೀರು ಸರಬರಾಜು ಮಾಡಲು ಪ್ಲಾನ್​ ರೂಪಿಸಲಾಗಿದೆ. ಈಗಾಗಲೇ ಮಂಜೂರಾತಿ ಕೊಡಿಸಲಾಗಿದ್ದು, ಮಾಜಿ ಸಂಸದ ಡಿ.ಕೆ.ಸುರೇಶ್​ ಈ ಬಗ್ಗೆ ಕ್ರಮವಹಿಸಲಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಚೆಕ್​ ಡ್ಯಾಂವೃಷಾಭಾವತಿ ನೀರನ್ನು ನೆಲಮಂಗಲ ಕೆರೆಗಳಿಗೆ ತುಂಬಿಸಿದರೆ ತಿಪ್ಪಗೊಂಡನಹಳ್ಳಿ ಜಲಾಶಯ ಮೂಲಕ ಮಂಚನಬೆಲೆ ಜಲಾಶಯಕ್ಕೆ ಹರಿದು, ಮಾಗಡಿ ಪಟ್ಟಣದ ಜನತೆಗೆ ನೀಡುತ್ತಿರುವ ಕುಡಿಯುವ ನೀರಿಗೆ ತೊಂದರೆಯಾಗಲಿದೆ. ಈ ಬಗ್ಗೆ ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಬಳಿ ಮಾತನಾಡಿ, ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಚೆಕ್​ ಡ್ಯಾಂ ನಿರ್ಮಿಸಿ, ಮಂಚನಬೆಲೆ ಜಲಾಶಯಕ್ಕೆ ಈ ನೀರು ಸೇರದಂತೆ ತಡೆದು, ಸತ್ತೆಗಾಲದಿಂದ ಕಣ್ವ ಮೂಲಕ ಮಂಚನಬೆಲೆ ಜಲಾಶಯಕ್ಕೆ ಬರುವ ನೀರನ್ನು ಮಾತ್ರ ತಡೆಹಿಡಿಯಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ, ಶ್ರೀವೇ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಬಾಲಕೃಷ್ಣ ತಿಳಿಸಿದರು.ಜೂನಿಯರ್​ ಇನ್​ ಕಾಂಗ್ರೆಸ್​ಬೆಳಗುಂಬ ಗ್ರಾಪಂ ವ್ಯಾಪ್ತಿಯಲ್ಲಿ ನನಗೆ ಹೆಚ್ಚು ಮಂದಿ ಮತಹಾಕಿಲ್ಲ. ಆದರೂ ಅಭಿವೃದ್ಧಿಯಲ್ಲಿ ಕಡೆಗಣಿಸಿಲ್ಲ, ಈಗ ಅಭಿವೃದ್ಧಿ ಮಾಡಿರುವವರಿಗೆ ಮುಂದೆ ಮತ ಹಾಕುತ್ತಾರಾ?, ಸೋಂಬೇರಿಗಳಿಗೆ ಮತ ಹಾಕುತ್ತಾರಾ ? ಎಂಬುದನ್ನು ತೀರ್ಮಾನಿಸಲಿ ಎಂದು ಶಾಸಕ ಬಾಲಕೃಷ್ಣ ಹೇಳಿದರಲ್ಲದೇ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡುವಷ್ಟು ದೊಡ್ಡವ ನಾನಲ್ಲ. ನಾನು ಜೂನಿಯರ್​ ಇನ್​ ಕಾಂಗ್ರೆಸ್​, ಸೀನಿಯರ್​ ಇನ್​ ಜನತಾ ಎಂದು ನುಣುಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net