ಪೌರಾಣಿಕ ಹಿನ್ನೆಲೆ ಪರಿಚಯಿಸುವ ಕಾರ್ಯವಾಗಲಿ

30 ylp1
Published on

ಯಲ್ಲಾಪುರ: ಧಾರ್ವಿುಕ ಭಾವನೆ, ಶ್ರದ್ಧೆಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಪೌರಾಣಿಕ ಹಿನ್ನೆಲೆಯನ್ನು ಪರಿಚಯಿಸುವ ಕಾರ್ಯ ಆಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಅಡಕೆ ಭವನದಲ್ಲಿ ಶನಿವಾರ ಸುಜ್ಞಾನ ಸೇವಾ ಫೌಂಡೇಷನ್, ಇ-ಯಲ್ಲಾಪುರ, ಹ್ಯಾಂಗ್ಯೋ ಐಸ್ಕ್ರೀಂ ಮತ್ತು ಗೌತಮ್ ಜುವೆಲರ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕೃಷ್ಣವೇಷದ ಫೋಟೋ ಸ್ಪರ್ಧೆ ಬಹುಮಾನ ವಿತರಣೆ ಹಾಗೂ ಕೃಷ್ಣಾರ್ಪಣಂ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಾಟಿ ವೈದ್ಯ ನಾರಾಯಣ ಹೆಗಡೆ ಗವೇಗುಳಿ ಅವರಿಗೆ ಸುಜ್ಞಾನ ಶ್ರೀ ಹಾಗೂ ಸಾಮಾಜಿಕ ಕಾರ್ಯಕರ್ತ ಶಿವಲಿಂಗಯ್ಯ ಅಲ್ಲಯ್ಯ ಮಠ ಅವರಿಗೆ ಸುಜ್ಞಾನ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃಷ್ಣ ವೇಷ ಫೋಟೋ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಫೌಂಡೇಷನ್ ಅಧ್ಯಕ್ಷ ಜಿ.ಎನ್. ಭಟ್ಟ ತಟ್ಟಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ಆರ್. ಹೆಗಡೆ ಕುಂಬ್ರಿಗುಡ್ಡೆ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ, ನಿರ್ಣಾಯಕರಾದ ಡಿ.ಜಿ. ಹೆಗಡೆ, ಗಣಪತಿ ಕಂಚಿಪಾಲ, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ, ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಶಾಂತ ಸಭಾಹಿತ, ಗೌತಮ ಜುವೆಲರ್ಸ್​ನ ಪ್ರಕಾಶ ಶೇಟ್, ಶಿಕ್ಷಕ ಸುಧಾಕರ ನಾಯಕ, ಫೌಂಡೇಷನ್ ಕಾರ್ಯದರ್ಶಿ ಜ್ಯೋತಿರಾಧಿತ್ಯ ಭಟ್ಟ, ಗಾಯತ್ರಿ ಬೋಳಗುಡ್ಡೆ ಉಪಸ್ಥಿತರಿದ್ದರು.

ಶ್ರೀಪಾದ ಭಟ್ಟ ಅವರಿಂದ ಗಾನಾಮೃತ, ವಿದುಷಿ ವಿನುತಾ ಹೆಗಡೆ, ವಾರುಣಿ ಹೆಗಡೆ ಅವರಿಂದ ನೃತ್ಯಾಮೃತ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net