

ಮಾಗಡಿ: ಸಮ ಸಮಾಜ ನಿರ್ಮಾಣದ ಪರಿಕಲ್ಪನೆಯಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಆರ್ಥಿಕ ಹಾಗೂ ಮಾನಸಿಕ ನೆಮ್ಮದಿ ನೀಡಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯ ಕೆ.ರಾಜು ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕುಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿ, ಗೃಹಲಕ್ಷಿ$್ಮಯೋಜನೆಯು ಗೃಹಿಣಿಯರಿಗೆ ನೆಮ್ಮದಿಯ ಬದುಕು ನೀಡಿದೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ್ದ ಪ್ರತಿ ಪದವರೂ ಈ ಯೋಜನೆಗಳನ್ನೇ ಇತರ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ನಮ್ಮ ಸರ್ಕಾರದ ಸಾಧನೆ, ಸೌಲಭ್ಯಗಳ ಕುರಿತು ತಾಲೂಕುಮಟ್ಟದಲ್ಲಿ ಆಂದೋಲನದ ಮೂಲಕ ಜನಜಾಗೃತಿಗೊಳಿಸುವ ಕೆಲಸವಾಗಬೇಕು ಎಂದರು.
ಹಳದಿ ಬೋರ್ಡ್ ಕಾರು ಖರೀದಿಸಿದರೆ ಬಿಪಿಎಲ್ ಕಾರ್ಡ್ ರದ್ದುಗೊಳಿಸುವಂತಿಲ್ಲ. ಬುಡಕಟ್ಟು ಜನಾಂಗದವರಿಗೆ ಪೌಷ್ಟಿಕ ಆಹಾರ ಪೂರೈಕೆಗೆ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಲಾಗುವುದು. ನ್ಯಾಯ ಬೆಲೆ ಅಂಗಡಿಯವರು ಪ್ರತಿ ತಿಂಗಳು 10ರಿಂದ 30ರವರೆಗೂ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8 ರವರೆಗೆ ಪಡಿತರ ವಿತರಣೆ ಮಾಡಬೇಕು. ಈ ಸಂಬಂಧ ದೂರು ಬಂದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಸುಮಾರು 15 ಸಾವಿರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈ ಸಂಬಂಧ ನಮ್ಮ ಸಮಿತಿ ಅಧ್ಯರು, ಸದಸ್ಯರು ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಅಧ್ಯ ಕೆ.ಆರ್.ಕಲ್ಕೆರೆ ಶಿವಣ್ಣ ಮಾತನಾಡಿ, ತಾಲೂಕಿನಲ್ಲಿ ಸುಮಾರು 120 ನ್ಯಾಯಬೆಲೆ ಅಂಗಡಿಗಳಿವೆ. ನ.9ರಂದು ನ್ಯಾಯಬೆಲೆ ಅಂಗಡಿ ಸಂಬಂಧ ಸಭೆ ಕರೆದು ಸಾಧಕ&ಬಾಧಕ ಚರ್ಚಿಸಲಾಗುವುದು. ಗೃಹಿಣಿಯರು ಐಟಿ ಹಾಗೂ ಜಿಎಸ್ಟಿ ಕಟ್ಟುತ್ತಿಲ್ಲವಾದರೂ ಗೃಹಲ್ಮ ಯೋಜನೆಯಿಂದ ವಂಚಿತರನ್ನಾಗಿ ಮಾಡಿದ್ದಾರೆ. ಬಹುತೇಕ ಬ್ಯಾಂಕ್ಗಳಲ್ಲಿ ಮನೆ ನಿರ್ಮಾಣ ಅಥವಾ ವಿದ್ಯಾಭ್ಯಾಸಕ್ಕಾಗಿ ಪಡೆದಿರುವ ಸಾಲವನ್ನೇ ಅಸವಾಗಿಟ್ಟು ಕೇಂದ್ರಸರ್ಕಾರ ಬಹುತೇಕ ಗೃಹಿಣಿಯರನ್ನು ಐಟಿ, ಜಿಎಸ್ಟಿಗೆ ಒಳಪಡಿಸಿರುವುದು ಸರಿಯಲ್ಲ ಎಂದರು.
ಪಡಿತರ ಕಾರ್ಡ್ಗೆ ಮತ್ತೆ ಅರ್ಜಿ ಸಲ್ಲಿಸಿ
ಬಿಪಿಎಲ್ ಲಾನುಭವಿಗಳ ಪಡಿತರ ರದ್ದಾಗಿದ್ದರೆ, ಅಂತಹವರು ಕೂಡಲೇ ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಿ ರದ್ದಾಗಿರುವ ಕಾರ್ಡ್ನ್ನು ಮತ್ತೆ ಪಡೆಯಲು ಅವಕಾಶವಿದೆ. 45 ದಿನದೊಳಗೆ ಅರ್ಜಿ ಸಲ್ಲಿಸಬೇಕು ಎಂದು ಕೆ.ರಾಜು ತಿಳಿಸಿದರು.
ಗೃಹಲಕ್ಷ್ಮೀ ಗುಡಿ ಕೈಗಾರಿಕೆ ಸ್ಥಾಪನೆ
ಗೃಹಲಕ್ಷ್ಮೀ ಹಣದಿಂದ ಗುಡಿ ಕೈಗಾರಿಕೆ ಸ್ಥಾಪಿಸುವ ಮೂಲಕ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಂಡಿದ್ದೇವೆ. ಸರ್ಕಾರ ಪಟ್ಟಣದಲ್ಲಿ ಸೂಕ್ತ ಸ್ಥಳ ಒದಗಿಸಿದರೆ ಮತ್ತಷ್ಟು ಗೃಹಿಣಿಯರ ಸ್ವಾವಲಂಬನೆಯ ಬದುಕಿಗೆ ನೆರವಾಗುತ್ತದೆ ಎಂದು ಕೆ.ರಾಜು ಮತ್ತು ತಾಲೂಕು ಅಧ್ಯ ಕಲ್ಕೆರೆ ಶಿವಣ್ಣ ಅವರಲ್ಲಿ ಕೆ.ವಿ.ಮಠದ ಮಮತಾ ಮಾಡಿದರು.
ಗೃಹಲಕ್ಷ್ಮೀ ಹಣದಿಂದ ಗುಡಿ ಕೈಗಾರಿಕೆ ಸ್ಥಾಪಿಸಿರುವ ಮಮತಾ ಹಾಗೂ ಲಿಂಗಮ್ಮ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಮಿತಿ ಸದಸ್ಯರಾದ ಹೊನ್ನಾಪುರದ ಶಿವಪ್ರಸಾದ್, ವನಜಾ, ತೇಜಸ್ಕುಮಾರ್, ಕೆಂಪೇಗೌಡ, ಮೊಹಮದ್ ಯಾಸಿನ್, ಹೊನ್ನಪ್ಪ, ಜಿ.ಆರ್. ಮನೋಹರಗೌಡ,ರಂಗಸ್ವಾಮಿ, ಶಾಂತಾಬಾಯಿ, ಬಿ.ಎಂ.ಲಿಂಗೇಶ್, ಎಂ.ಜಿ.ದೇವರಾಜು, ರಾಮಯ್ಯ ಇದ್ದರು.