ವೃದ್ಧರು ಬೀದಿಪಾಲಾಗದಿರಲಿ

ಅರಕೇರಾ ಸಮಾಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ ಪೊಲೀಸ್ ಪಾಟೀಲ್ ಉದ್ಘಾಟಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ, ಎಸ್ಡಿಎಂಸಿ ಅಧ್ಯಕ್ಷ ಮಾನಸಯ್ಯ ಪೂಜಾರಿ, ಸಿಂಧನೂರಿನ ಕಾರುಣ್ಯನೆಲೆ ವೃದ್ಧಾಶ್ರಮದ ಕಾರ್ಯಾಧ್ಯಕ್ಷ ಡಾ.ಚನ್ನಬಸ್ಸಯ್ಯ ಸ್ವಾಮಿ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನವೀರಯ್ಯ ಸ್ವಾಮಿ ಹಿರೇಮಠ ಇತರರಿದ್ದರು.
ಅರಕೇರಾ ಸಮಾಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ ಪೊಲೀಸ್ ಪಾಟೀಲ್ ಉದ್ಘಾಟಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ, ಎಸ್ಡಿಎಂಸಿ ಅಧ್ಯಕ್ಷ ಮಾನಸಯ್ಯ ಪೂಜಾರಿ, ಸಿಂಧನೂರಿನ ಕಾರುಣ್ಯನೆಲೆ ವೃದ್ಧಾಶ್ರಮದ ಕಾರ್ಯಾಧ್ಯಕ್ಷ ಡಾ.ಚನ್ನಬಸ್ಸಯ್ಯ ಸ್ವಾಮಿ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನವೀರಯ್ಯ ಸ್ವಾಮಿ ಹಿರೇಮಠ ಇತರರಿದ್ದರು.
Published on

ಅರಕೇರಾ: ಭಾರತೀಯ ಸಂಸ್ಕೃತಿಯಲ್ಲಿ ವೃದ್ಧಾಶ್ರಮಗಳು ಮಾರಕ ಸಂದೇಶ ಸಾರುತ್ತವೆ. ಆದ್ದರಿಂದ ತಂದೆ-ತಾಯಿಯ ಕಾಳಜಿ ಮಾಡಬೇಕು ಎಂದು ಸಿಂಧನೂರಿನ ಕಾರುಣ್ಯನೆಲೆ ವೃದ್ಧಾಶ್ರಮದ ಕಾರ್ಯಾಧ್ಯಕ್ಷ ಡಾ.ಚನ್ನಬಸ್ಸಯ್ಯ ಸ್ವಾಮಿ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ತಂದೆ, ತಾಯಿ ಇದ್ದಾಗ ಪ್ರಾತಿನಿಧ್ಯ ನೀಡದೆ, ಮರಣದ ನಂತರ ಪಶ್ಚಾತಾಪ ಪಟ್ಟರೆ ಫಲವಿಲ್ಲ. ವಿದೇಶದಲ್ಲಿ ಶ್ರೀಮಂತರು ಹಿರಿಯರನ್ನು ಬೀದಿಪಾಲು ಮಾಡುತ್ತಿದ್ದಾರೆ. ವೃದ್ಧಾಶ್ರಮದಲ್ಲಿ ಇದ್ದವರು ಅನಾಥರಲ್ಲ, ಅವರನ್ನು ಬಿಟ್ಟಿರುವವರು ನಿಜವಾದ ಅನಾಥರು ಎಂದರು. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ. ಸಾಧನೆ ಸೋಮಾರಿಗಳ ಸ್ವತ್ತಲ್ಲ, ಸಾಧಕನ ಸ್ವತ್ತು ಎಂದು ಕಿವಿ ಮಾತು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಮಾತನಾಡಿ, ಮೊದಲ ಬಾರಿಗೆ ಈ ಶಾಲೆಯಲ್ಲಿ ಚಾಲನೆ ನೀಡಿದ ಅಕ್ಷರ ದಾಸೋಹ ಯೋಜನೆ ರಾಜ್ಯ ವ್ಯಾಪಿಸಿದೆ. ಭೂದಾನಿಗಳಾದ ದಿ.ರಾಜಾ ಕಿಷ್ಠಪ್ಪ ನಾಯಕ, ದಿ.ಸಿದ್ದಯ್ಯ ಹವಾಲ್ದಾರ್ ಕೊಡುಗೆ ಅಪಾರ. ಈ ಶಾಲೆಯ ವಿದ್ಯಾರ್ಥಿಗಳು ಸಂಸದ, ಸಚಿವ, ಎಸಿ ಸೇರಿ ವಿವಿಧ ಹುದ್ದೆಗಳಲ್ಲಿದ್ದಾರೆ ಎಂದರು.

2024-25 ನೇ ಸಾಲಿನಲ್ಲಿ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ, ಜಿಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ ಪೊಲೀಸ್ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ಮಾನಸಯ್ಯ ಪೂಜಾರಿ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನವೀರಯ್ಯ ಸ್ವಾಮಿ ಹಿರೇಮಠ, ಪಿಡಿಒ ವೆಂಕೋಬ ನಾಯಕ, ಸಿಆರ್‌ಪಿಗಳಾದ ಬಸವರಾಜ, ಬಸ್ಸಯ್ಯ ಸಾತಲ್, ಮುಖ್ಯ ಶಿಕ್ಷಕರಾದ ಲಕ್ಷ್ಮಣ ಛಲವಾದಿ, ದೇವೇಂದ್ರ ಕುಮಾರ, ಪ್ರಮುಖರಾದ ಬಸವರಾಜ ಪೂಜಾರಿ, ಡಾ.ಎಚ್.ಎ.ನಾಡಗೌಡ, ರಂಗಮ್ಮ ನಾಯಕ, ಸೀತಣ್ಣ ನಾಯಕ ಗುರಿಕಾರ, ವೀರುಪಣ್ಣ ನಾಯಕ ದೊರೆ, ಚಂದ್ರಶೇಖರ ಶೆಟ್ಟಿ, ಬಸವರಾಜ ನಾಯಕ ಕ್ವಾಟೆ ದೊರೆ, ಶೇಖರಪ್ಪ ಗೌಡ ಮಾಲಿಪಾಟೀಲ್, ಸಿದ್ದಾರ್ಥ ಹವಲ್ದಾರ, ಬಸವರಾಜಪ್ಪ ಗುಡಿ, ರವಿ ನಾಯಕ, ವೆಂಕಟೇಶ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net