

ಮದ್ದೂರು: ಸಹಕಾರ ಸಂಘಗಳು ರಾಜಕಾರಣದಿಂದ ಹೊರತಾಗಿದ್ದು, ಸಹಕಾರಿ ತತ್ವದಡಿ ಕಾರ್ಯನಿರ್ಹಿಸಬೇಕೆಂದು ಹಿರಿಯ ಸಹಕಾರಿ ಡಿ.ಕೆ.ಕೃಷ್ಣ ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪ್ರಗತಿಪರ ಸಂಘಟನೆ ಏರ್ಪಡಿಸಿದ್ದ ಸಹಕಾರಿ, ಜಾಗೃತಿ ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರಿಗೆ ಆಡಾಳಿತಾತ್ಮಕ ತರಬೇತಿ ವಿಷಯ ಸಿದ್ಧಪಡಿಸುವ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಸಹಕಾರ ಸಂಘಗಳ ದೈನಂದಿನ ದಾಖಲಾತಿಗಳ ನಿರ್ವಹಣೆಯಲ್ಲಿ ಪರಿಪಕ್ವತೆ ಸಾಧಿಸುವಲ್ಲಿ ಆಡಳಿತ ಮಂಡಳಿಯವರಲ್ಲಿ ಕಾಳಜಿ ಮತ್ತು ಜ್ಞಾನ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ತರಬೇತಿ ಅಗತ್ಯವಾದದು ಎಂದರು.
ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಆಸಕ್ತ ಸಹಕಾರಿಗಳಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ತರಬೇತಿ ನೀಡಿ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದ ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಸುರೇಶ್ ಇಂತಹ ಕ್ರಮಗಳು ಸಹಕಾರ ಸಂಘಗಳ ಬಲವರ್ಧನೆಗೆ ಪೂರಕವಾಗಲಿವೆ ಎಂದರು.
ಸಹಕಾರ ಸಂಘಗಳ ಗಣಕೀರಣ ಹಾಗೂ ಸಾಪ್ಟ್‌ವೇರ್ ಬಳಕೆ ಆಡಳಿತದಲ್ಲಿ ಪಾರದರ್ಶಕತೆ ತರಲು ನೆರವಾಗಲಿದೆ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರಿಗೆ ಆಡಳಿತದಲ್ಲಿ ತಾಂತ್ರಿಕತೆ ಕುರಿತು ವಿಷಯ ಅಳವಡಿಸಿ ತರಬೇತಿ ನೀಡುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರಬಹುದು ಎಂದು ಸಲಹೆ ನೀಡಿದರು
ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಕ್ಯಾತಘಟ್ಟ ರವಿಕುಮಾರ್, ತೊರೆಶೆಟ್ಟಹಳ್ಳಿ ಪ್ರಸನ್ನ, ಸಬ್ಬನಹಳ್ಳಿ ಹೊನ್ನೇಗೌಡ, ವಳಗೆರೆಹಳ್ಳಿ ಪುಟ್ಟರಾಜು ವಿಶೇಷ ಉಪನ್ಯಾಸ ನೀಡಿದರು.
ಪ್ರಗತಿಪರ ಸಂಘಟನೆಯ ಮಾರ್ಗದರ್ಶಕ ನ.ಲಿ.ಕೃಷ್ಣ, ಕಾರ್ಯನಿರ್ವಾಹಕ ಸಂಚಾಲಕ ಶ್ರೀನಿವಾಸ್, ಹಾಗಹಳ್ಳಿ ಬಸವರಾಜು, ನಿವೃತ್ತ ಶಿಕ್ಷಕ ಚನ್ನಪ್ಪ, ಗಾಯಕ ಹುರಗಲವಾಡಿ ರಾಮಯ್ಯ, ಮುಖಂಡ ತಗ್ಗಹಳ್ಳಿ ಗೋಪಾಲ್, ಮಧುಸೂದನ್, ಜಿ.ಕೆ.ರಾಜು, ಮಲವರಾಜು, ಸಂಜಯ್ ಬಾಬು ಇದ್ದರು.