

ನರೇಗಲ್ಲ: ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 135ನೇ ಜನ್ಮ ದಿನ ಆಚರಿಸಲಾಯಿತು.
ಮುಖ್ಯ ಶಿಕ್ಷಕಿ ಬಿ.ಜಿ. ಶಿರ್ಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಈ ಜಗತ್ತು ಕಂಡ ಅಪರೂಪದ ಶಿಕ್ಷಕರಾಗಿದ್ದರು. ಶಿಕ್ಷಕ ವೃತ್ತಿಯಿಂದಲೆ ಅವರು ರಾಷ್ಟ್ರಪತಿ ಹುದ್ದೆಯನ್ನೂ ಅಲಂಕರಿಸಿದರು. ಅವರಲ್ಲಿನ ಆದರ್ಶ ಗುಣಗಳನ್ನು ಇಂದಿನ ಶಿಕ್ಷಕರು ಅಳವಡಿಸಿಕೊಂಡು ಹೋಗುವ ಅಗತ್ಯತೆ ಇದೆ ಎಂದರು.
ಶಿಕ್ಷಕಿಯರಾದ ಎಸ್.ವಿ. ಹಿರೇಮಠ, ವಿ.ಪಿ. ಗ್ರಾಮಪುರೋಹಿತ, ಎಸ್.ಕೆ. ಕುಲಕರ್ಣಿ, ವಿ.ಎಸ್. ಜಾಧವ, ಎಸ್. ಎಚ್. ಮಾನ್ವಿ, ಎನ್.ಜೆ. ಸಂಗನಾಳ, ಜಿ.ವಿ. ಕೆರಿಯವರ, ಶಿಕ್ಷಕರಾದ ಎಂ.ವಿ. ಕಡೇತೋಟದ, ಕೆ.ಐ. ಕೋಳಿವಾಡ, ಐ.ಬಿ. ಒಂಟೆಲಿ ಇದ್ದರು.