ವಿದ್ಯಾರ್ಥಿಗಳು ನಾಯಕತ್ವ, ಮಾನವೀಯ ಗುಣ ಬೆಳೆಸಿಕೊಳ್ಳಲಿ

oppo_2
ಮದ್ದೂರು ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿನೀವಾ ಒಪ್ಪದ ದಿನಾಚರಣೆ ಕಾರ್ಯಕ್ರಮವನ್ನು ಎಂದು ಡಾ.ಮೀರಾಶಿವಲಿಂಗಯ್ಯ ಉದ್ಘಾಟಿಸಿದರು. ಕೆ.ಟಿ.ಹನುಮಂತು, ಪ್ರೊ.ಎಸ್.ಮಂಜು, ಪ್ರೊ.ಕೆ.ಬಿ.ನಾರಾಯಣ, ರಂಗಸ್ವಾಮಿ, ಮಂಗಳಾಯೋಗೇಶ್, ಕೃಷ್ಣ ಇದ್ದರು.
Published on

ಮದ್ದೂರು: ಪ್ರವಾಹ, ಚಂಡಮಾರುತಗಳಂತಹ ವಿಪತ್ತುಗಳು ಸಂಭವಿಸಿದಾಗ, ರೆಡ್ ಕ್ರಾಸ್ ಸ್ಥಳೀಯ ಸಮುದಾಯಗಳಿಗೆ ಆಹಾರ, ಆಶ್ರಯ ಮತ್ತು ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸುವ ಮೂಲಕ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಿದೆ ಎಂದು ಭಾರತೀಯ ರೆಡ್ ಕ್ರಾಸ್ ಜಿಲ್ಲಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ ಪ್ರಶಂಸೆ ವ್ಯಕ್ತಪಡಿಸಿದರು.

ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಗುರುವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗ ವತಿಯಿಂದ ಹಮ್ಮಿಕೊಂಡಿದ್ದ ಜಿನೀವಾ ಒಪ್ಪಂದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೆಡ್ ಕ್ರಾಸ್ ಒಂದು ಅಂತಾರಾಷ್ಟ್ರೀಯ ಮಾನವೀಯ ಚಳವಳಿಯಾಗಿದ್ದು, ಯುದ್ಧ ಮತ್ತು ವಿಪತ್ತುಗಳ ಸಮಯದಲ್ಲಿ ಬಳಲುತ್ತಿರುವ ಜನರಿಗೆ ಸಹಾಯ ಮಾಡುತ್ತದೆ. ಇದರ ಮುಖ್ಯ ಉದ್ದೇಶಗಳು ಮಾನವ ದುಃಖವನ್ನು ನಿವಾರಿಸುವುದು, ಆರೋಗ್ಯವನ್ನು ಉತ್ತೇಜಿಸುವುದು, ವಿಪತ್ತು ಪರಿಹಾರ ಒದಗಿಸುವುದು ಮತ್ತು ಎಲ್ಲ ಜನರಲ್ಲಿ ತಿಳಿವಳಿಕೆ ಮತ್ತು ಶಾಂತಿ ಬೆಳೆಸುವುದು ಎಂದರು.

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಹಾಗೂ ಭಾರತೀಯ ರೆಡ್‌ಕ್ರಾಸ್ ನಿರ್ದೇಶಕ ಕೆ.ಟಿ.ಹನಮಂತು ಮಾತನಾಡಿ, ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯು ಸ್ವಿಟ್ಜರ್‌ಲೆಂಡ್ ದೇಶದ ಜಿನೀವಾ ನಗರದಲ್ಲಿ ಸ್ಥಿತವಾಗಿರುವ ಒಂದು ಜನಪರ ಸೇವಾ ಸಂಸ್ಥೆ. ಜಿನೀವಾ ಒಪ್ಪಂದಗಳಲ್ಲಿ ಭಾಗಿಯಾಗಿರುವ ದೇಶಗಳು ಯುದ್ಧ ಕಾಲದಲ್ಲಿ ಈ ಸಂಸ್ಥೆಗೆ ಯುದ್ಧದಿಂದ ಪ್ರಭಾವಿತರಾಗಿರುವವರನ್ನು ಚಿಕಿತ್ಸೆ ನೀಡುವ ಹಕ್ಕನ್ನು ನೀಡಿವೆ ಎಂದರು.

1864 ಹೆನ್ರಿ ಡುನಾಂಟ್ ಅವರಿಂದ ಸ್ಥಾಪಿತವಾದ ಈ ಸಂಸ್ಥೆಗೆ 1917, 1944 ಮತ್ತು 1963ರ ನೊಬೆಲ್ ಶಾಂತಿ ಪುರಸ್ಕಾರಗಳು ದೊರಕಿರುವುದು ರೆಡ್ ಕ್ರಾಸ್ ಸಂಸ್ಥೆ ಯಾವ ರೀತಿ ಜನಪರ ಕೆಲಸಗಳನ್ನು ಮಾಡುತ್ತಿದೆ ಎಂಬುದು ತಿಳಿಯುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದು ಚಳವಳಿಯನ್ನು ಮಾಡುತ್ತಿರುವ ಹಳೆಯ ಮತ್ತು ಅತ್ಯಂತ ಗೌರವಾನ್ವಿತ ವಿಶ್ವದ ಸಂಸ್ಥೆ. ಇದು ಬಹಳಷ್ಟು ಚಿರಪರಿಚಿತ ಸಂಸ್ಥೆಗಳಲ್ಲಿ ಒಂದಾಗಿದೆ. ಗಾಯಗೊಂಡ ಸೈನಿಕರನ್ನು ರಾಷ್ಟ್ರೀಯ ಪರಿಹಾರ ಸಮಾಜಗಳ ಅಡಿಪಾಯ ಸಹಾಯ ಮಾಡುತ್ತವೆ. ಗಾಯಗೊಂಡ ಸೈನಿಕರಿಗೆ ರಕ್ಷಣೆ ನೀಡುತ್ತದೆ ಎಂದರು.

ವಿದ್ಯಾರ್ಥಿಗಳು ಯುವ ರೆಡ್ ಕ್ರಾಸ್ ಘಟಕಕ್ಕೆ ಸೇರುವ ಮೂಲಕ ನಾಯಕತ್ವ, ಮಾನವೀಯ ಗುಣಗಳು ಹಾಗೂ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಗುಣಗಳನ್ನು ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಂಡ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎಸ್.ಮಂಜು ವಿಶೇಷ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ, ಯುವ ರೆಡ್ ಕ್ರಾಸ್ ಘಟಕ ಜಿಲ್ಲಾ ಜಿಂಟಿ ಕಾರ್ಯದರ್ಶಿ ರಂಗಸ್ವಾಮಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಮಂಗಳಾಯೋಗೇಶ್ ಹಾಗೂ ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net