ಅಧ್ಯಾತ್ಮ ಬಿತ್ತುವ ಕಾರ್ಯವಾಗಲಿ

KUNDGOL PATRIKE
Published on

ಕುಂದಗೋಳ: ಜಗತ್ತಿನಲ್ಲಿಯೇ ಆತ್ಮ ಜ್ಞಾನ ತಿಳಿಯಲು ಇರುವ ಶ್ರೇಷ್ಠ ವಿಶ್ವವಿದ್ಯಾಲಯವಿದ್ದರೆ ಅದು ಈಶ್ವರೀಯ ವಿಶ್ವವಿದ್ಯಾಲಯ.

ಇಂದು ಜಗತ್ತಿನ 147 ದೇಶಗಳಲ್ಲಿ ಈಶ್ವರೀಯ ಕೇಂದ್ರಗಳ ಮೂಲಕ ಆತ್ಮಜ್ಞಾನ ನೀಡುವ ಮೂಲಕ ಅಧ್ಯಾತ್ಮ ಕಾರ್ಯ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾಧ್ಯಮವು ಸಹ ಅಧ್ಯಾತ್ಮ ಕುರಿತು ಸುದ್ದಿಗಳನ್ನು ಬಿತ್ತರಿಸುವ ಕಾರ್ಯ ಮಾಡಲಿ ಎಂದು ಬ್ರಹ್ಮಕುಮಾರಿ ಉಮಾ ಅಕ್ಕ ಹೇಳಿದರು.


ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಬ್ರಹ್ಮಕುಮಾರಿ ಸುನಿತಾ ಅಕ್ಕನವರು ಮಾತನಾಡಿದರು.

ಬ್ರಹ್ಮಕುಮಾರಿ ಸುಮಂಗಲಾ ಅಕ್ಕನವರು, ವರದಿಗಾರರಾದ, ಗಿರೀಶ ಘಾಟಗೆ, ರವಿ ಕಮಡೊಳ್ಳಿ, ಮಂಜುನಾಥ ಶಿವಕ್ಕನವರ, ಬಸವರಾಜ ಗುಡ್ಡದಕೇರಿ, ವೈ.ಡಿ. ಹೊಸುರ, ವಾಸುದೇವ ಮುರಗಿ, ಸುನೀಲ ಕರೋಗಲ್, ಕೆ.ಆರ್. ಡಗಲಿ, ಪ್ರವೀಣ ಗಿಡಸಕ್ಕನವರ, ನಾಗರಾಜ ಕಂಕುರ, ಬಸವರಾಜ ದೀಪಳ್ಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net