

ಅರಕಲಗೂಡು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ಮಕ್ಕಳು ವಿದ್ಯೆಗೆ ಹೆಚ್ಚು ಒತ್ತು ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಎ.ಮಂಜು ಹೇಳಿದರು.
ತಾಲೂಕಿನ ಮಲ್ಲಿಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೆಚ್ಚುವರಿ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಅವರ ಬದುಕು ಬದಲಾಗುತ್ತದೆ. ಮಲೆನಾಡು ಭಾಗವಾದ ಮಲ್ಲಿಪಟ್ಟಣ ಹೆಚ್ಚಿನ ಮಳೆಯಾಗುವ ಕಾರಣ ಮಕ್ಕಳು ದೂರದ ಊರುಗಳಿಗೆ ತೆರಳಿ ಶಿಕ್ಷಣ ಪಡೆಯಲು ಕಷ್ಟ ಎಂಬ ಹಿನ್ನೆಲೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷೆ ಸುಮಿತ್ರಮ್ಮ, ಸದಸ್ಯ ಚಂದ್ರೇಗೌಡ, ನಾಗರಾಜ್, ಪಿಡಿಒ ಡಿ.ಎಸ್.ಅರುಣ್ ಕುಮಾರ್, ಸಿಡಿಸಿ ಉಪಾಧ್ಯಕ್ಷ ಎಚ್.ಎಲ್.ವಿಶ್ವನಾಥ್, ಪ್ರಾಂಶುಪಾಲೆ ಎಲ್.ಕೆ.ಚಂದ್ರಕಲಾ, ಮುಖ್ಯ ಶಿಕ್ಷಕಿ ಮಮತಾ, ಇಸಿಒ ಶಿವಪ್ರಕಾಶ್, ಜಿಪಂ ಎಇಇ ರಮೇಶ್, ಸುರೇಶ್, ಬಸವರಾಜ್ ಇತರರಿದ್ದರು.