

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ನಿವೃತ್ತಿ ಹೊಂದಿ ಪಿಂಚಣಿ ಪಡೆಯುತ್ತಿರುವವರು ತಾವು ದುಡಿದ ಸಂಸ್ಥೆಯಲ್ಲಿ ದಿನಕ್ಕೆ ಕನಿಷ್ಠ 2 ಗಂಟೆಗಳ ಕಾಲ ಪಾಠ ಪ್ರವಚನ ಅಥವಾ ಶಾಲೆಯ ಪ್ರಗತಿಗಾಗಿ ಸಮಯ ನೀಡಿದರೆ ಶಾಲೆಗಳು ಉಳಿಯಲು ಸಹಕಾರಿಯಾಗುತ್ತದೆ ಎಂದು ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಹೇಳಿದರು.
ಶ್ರೀವಾಣಿ ವಿದ್ಯಾಭಿವೃದ್ಧಿ ಸಂ ರಜತಾದ್ರಿ ವತಿಯಿಂದ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಬಿ.ಭೋಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಯಕ್ಷಶಿಕ್ಷಣ ಉದ್ಘಾಟಿಸಿದರು.
ಶಿವ ಶತಸ್ಮತಿ ಎಂಬ ಶತವಾನೋತ್ಸವ ಸಂಚಿಕೆಯನ್ನು ಶಾಸಕ ಕಿರಣಕುವಾರ್ ಕೊಡ್ಗಿ ಅನಾವರಣಗೊಳಿಸಿದರು. ಹಳ್ನಾಡು ದೊಡ್ಮನೆ ಭೋಜರಾಜ ಶೆಟ್ಟಿ, ವಯೋ ನಿವೃತ್ತರಾದ ಹಳ್ನಾಡು ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಶೆಟ್ಟಿ, ಶ್ರೀನಿಕೇತನ ಪ್ರೌಢಶಾಲೆಯ ವೈ.ಅಚ್ಯುತ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ನವಭಾರತ್ ಸೌಹಾರ್ದ ಸೊಸೈಟಿ ಮೈರ್‌ಕೊಮೆ ಅಧ್ಯಕ್ಷ ಪ್ರಮೋದ್ ಕುವಾರ್ ಶೆಟ್ಟಿ ಶೇ.100 ಫಲಿತಾಂಶ ದಾಖಲಿಸಿದ ಎಲ್ಲ ವಿದ್ಯಾರ್ಥಿಗಳಿಗೂ ನಗದು ಪುರಸ್ಕಾರ ನೀಡಿದರು. ವಿಧ್ಯಾಭಿವೃದ್ಧಿ ಸಂ ಕಾರ್ಯದರ್ಶಿ ಡಾ.ಎನ್.ವಿಶ್ವನಾಥ ಶೆಟ್ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿದರು.
ಜನ್ಮ ಶತವಾನೋತ್ಸವ ಸಮಿತಿ ಅಧ್ಯಕ್ಷ ಬಿ.ರಾಜರಾಮ ಶೆಟ್ಟಿ, ಉಪಾಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ಕೋಶಾಧಿಕಾರಿ ಡಾ.ಸಂತೋಷ ಕುವಾರ್ ಶೆಟ್ಟಿ ಉಪಸ್ಥಿತರಿದ್ದರು. ಹರೀಂದ್ರನಾಥ ಶೆಟ್ಟಿ ಸಂಸ್ಥಾಪಕರ ಸಂಸ್ಮರಣೆ ವಾಡಿದರು. ಗೌರವ ವಾರ್ಗದರ್ಶಕ ಪ್ರೊ.ಸಖಾರಾಮ ಸೋಮಯಾಜಿ ಸ್ವಾಗತಿಸಿ, ನಿವೃತ್ತ ಮುಖ್ಯ ಶಿಕ್ಷಕ ಎಂ.ವಿಶ್ವನಾಥ ಶೆಟ್ಟಿ ವಂದಿಸಿದರು.