ಬಡ ಮಕ್ಕಳು ಉನ್ನತ ಹುದ್ದೆಗೇರಲಿ

05-11-rama-CMC
Published on

* ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಆಶಯ

* ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ ವಿತರಣೆ

ರಾಮನಗರ

ಸಾಕಷ್ಟು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕೋಚಿಂಗ್​ ಸೆಂಟರ್​ಗಳಿಗೆ ಹೋಗಿ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀೆಗಳಿಗೆ ತರಬೇತಿ ಪಡೆಯುವುದು ಕಷ್ಟಸಾಧ್ಯವಾದ ಕಾರಣ ಅರ್ಹರಿಗೆ ನಗರಸಭೆ ವೆಚ್ಚದಲ್ಲಿ ತರಬೇತಿ ನೀಡಲು ಕ್ರಮವಹಿಸಲಾಗಿದೆ ಎಂದು ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರಸಭೆಯಿಂದ ಅಕ್ಕ ಐಎಎಸ್​ ಸಹಯೋಗದೊಂದಿಗೆ ಉಚಿತವಾಗಿ ಕೆ&ಸೆಟ್​, ನೀಟ್​ ಹಾಗೂ ಜಿಇಇ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಬುಧವಾರ ಉಚಿತ ಅಧ್ಯಯನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ಧ್ವನಿ ಇಲ್ಲದ ಸಮಾಜದ ವಿದ್ಯಾರ್ಥಿಗಳು ಮುಖ್ಯ ವಾಹಿನಿಗೆ ಬರಬೇಕು, ಅವರಿಗೂ ಐಎಎಸ್​, ಕೆಎಎಸ್​ ಮಾಡುವ ಅವಕಾಶ ಸಿಗಬೇಕು ಎನ್ನುವ ಉದ್ದೇಶದೊಂದಿಗೆ ಅಕ್ಕ ಅಕಾಡೆಮಿ ತರಬೇತಿ ನೀಡುತ್ತಿದ್ದು, ನಗರಸಭೆ ಆಶಯಕ್ಕೆ ಕೈ ಜೋಡಿಸಿದೆ. ಈ ತರಬೇತಿಯಲ್ಲಿ ಭಾಗವಹಿಸಿರುವ ಎಲ್ಲ ವಿದ್ಯಾರ್ಥಿಗಳಿಗೂ ಯಶಸ್ಸು ಸಿಗಲಿ, ನಿಮ್ಮ ಯಶಸ್ಸನ್ನು ನೋಡಿ ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮದಲ್ಲಿ ಇನ್ನಷ್ಟು ಹೆಚ್ಚು ಮಕ್ಕಳು ಭಾಗವಹಿಸುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರಸಭೆ ಆಯುಕ್ತ ಡಾ.ಜಯಣ್ಣ ಮಾತನಾಡಿ, ವೃತ್ತಿಪರ ಕೋರ್ಸುಗಳಿಗೆ ತಯಾರಿ ನಡೆಸುವ ಮಕ್ಕಳಿಗೆ ನಮ್ಮ ಕಡೆಯಿಂದ ಸಣ್ಣ ಪೋತ್ಸಾಹ ನೀಡುತ್ತಿದ್ದೇವೆ. ಯಾವ ಪಾಲಕರು ಇಂತಹ ತರಬೇತಿಯನ್ನು ಕೊಡಿಸಲು ಸಾಧ್ಯವಿಲ್ಲವೋ ಅಂತಹವರ ಮಕ್ಕಳಿಗಾಗಿ ತರಬೇತಿ ಕಾರ್ಯಕ್ರವನ್ನು ಶುರುಮಾಡಿದ್ದೇವೆ. ಇದೀಗ ಕೆ&ಸೆಟ್​, ನೀಟ್​, ಜೆಇಇ ಪರೀಕ್ಷೆಗಳ ತಯಾರಿಗೆ ಉಚಿತ ಅಧ್ಯಯನ ಸಾಮಗ್ರಿಗಳನ್ನು ವಿತರಿಸುತ್ತಿದ್ದೇವೆ. ಈ ಅಧ್ಯಯನ ಸಾಮಗ್ರಿಗಳನ್ನು ಹೇಗೆ ತಯಾರಿಸಲಾಗುತ್ತಿದೆ ಎನ್ನುವುದು ಹಲವರಿಗೆ ಗೊತ್ತಿರುವುದಿಲ್ಲ. ದೊಡ್ಡ ದೊಡ್ಡ ನಗರಗಳಲ್ಲಿರುವ ಕೋಚಿಂಗ್​ ಕೇಂದ್ರಗಳಲ್ಲಿ ಅವರು ಕೇಳಿದಷ್ಟು ಕೊಡುವ ವಿದ್ಯಾರ್ಥಿಗಳಿಗೆ ಮಾತ್ರ ಸಿಗುವ ಅಧ್ಯಯನ ವಸ್ತು ಇದು. ವಿದ್ಯಾರ್ಥಿಗಳ ಸಮಯ ವ್ಯರ್ಥ ಆಗದಂತೆ ಪರೀೆಯನ್ನು ಎದುರಿಸಲು ಏನು ಬೇಕು ಅದನ್ನ ಮಾತ್ರ ಈ ಅಧ್ಯಯನ ಸಾಮಗ್ರಿಯಲ್ಲಿ ಕೊಟ್ಟಿರುತ್ತಾರೆ. ಹೀಗಾಗಿ ಇದರಲ್ಲಿ ಒಂದು ವಾಕ್ಯವನ್ನೂ ಬಿಡದೇ ಓದಿ, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪ್ರತಿ ತರಗತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಪ್ರಶ್ನೆಗಳನ್ನು ಕೇಳಬೇಕು. ಪ್ರವೇಶ ಪರೀೇಯಲ್ಲಿ ಓಎಂಆರ್​ ತುಂಬುವುದರಿಂದಲೇ ನಿಮ್ಮ ಪರೀೆ ಶುರುವಾಗುತ್ತದೆ. ಹೀಗಾಗಿ ಯಾವುದೇ ಅನುಮಾನಗಳು ಇರದಂತೆ ತಯಾರಿ ಮಾಡಿಕೊಂಡು ಪ್ರವೇಶ ಪರೀೆಯ ಕೊಠಡಿಯಲ್ಲಿ ಹೋಗಿ ಕುಳಿತುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಉಚಿತ ತರಬೇತಿ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿನಿ ತೃಪ್ತಿ ಅನಿಸಿಕೆ ಹಂಚಿಕೊಂಡರು. ನಗರಸಭೆ ಉಪಾಧ್ಯೆ ಆಯಿಷಾ ಬಾನು,  ಕಾಲೇಜಿನ ಎಸ್​ಡಿಎಂಸಿ ಉಪಾಧ್ಯ ಬೈರೇಗೌಡ, ನಗರಸಭೆ ಸದಸ್ಯರಾದ ಅಬ್ದುಲ್​ ಸಮದ್​, ಅಯೂಬ್​ ಖಾನ್​, ಜಯ ಲಕ್ಷ್ಮಮ್ಮ,  ಪಾರ್ವತಮ್ಮ, ಪ್ರವಿಣ್​, ಗೋವಿಂದರಾಜ್​, ಡಿ.ನಾಗರಾಜು, ದಲಿತ ಸಂಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಶಿವಕುಮಾರಸ್ವಾಮಿ, ನಗರಸಭೆ ರಾಯಭಾರಿ ಚಿತ್ರಾ ರಾವ್​, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ರಾಮನಗರ ರಾಜ್ಯಕ್ಕೆ ಮಾದರಿ

ಅಕ್ಕ ಐಎಎಸ್​ ಅಕಾಡೆಮಿಯ ನಿರ್ದೇಶಕ ಡಾ.ಶಿವಕುಮಾರ್​ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮ ಪರೀಕ್ಷೆಗೆ ಕೋಚಿಂಗ್​ ನೀಡಬೇಕು ಎನ್ನುವ ರಾಮನಗರ ನಗರಸಭೆ ಕ್ರಮ ರಾಜ್ಯದಲ್ಲೇ ಮಾದರಿ. ರಾಜ್ಯದಲ್ಲಿ ಯಾವ ನಗರಸಭೆಯೂ ಇಂತಹ ಕಾರ್ಯಕ್ರಮವನ್ನು ಮಾಡಿಲ್ಲ. ಆದರೆ ರಾಮನಗರ ನಗರಸಭೆ ಬಡವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಚಿತವಾಗಿ ತರಬೇತಿ ಕಾರ್ಯಕ್ರಮವನ್ನು ರೂಪಿಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಅಧ್ಯಯನ ಸಾಮಗ್ರಿಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net