

ಕುರುಗೋಡು: ಒತ್ತಡದ ಬದುಕಿನಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ತಪಾಸಣೆ ಮಾಡಿಸುವ ಮೂಲಕ ಆರೋಗ್ಯಕ್ಕೆ ಒತ್ತು ನೀಡಬೇಕು ಎಂದು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಜಶೇಖರ್ ಹೇಳಿದರು.
ಇದನ್ನೂ ಓದಿ:ಶ್ರಮಿಕ ವರ್ಗ ಆರೋಗ್ಯಕ್ಕೆ ಉದಾಸೀನತೆ ತೋರಬಾರದು
ಸಮೀಪದ ಕುಡತಿನಿಯ ಹರಗಿನಡೋಣ ಬಸವನಗೌಡ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿ.ರಾಜಶೇಖರ್, ಜಿ.ಎಸ್.ವೆಂಕಟರಮಣ ಬಾಬು ಹಾಗೂ ಬಳ್ಳಾರಿಯ ಎಂ.ಎಂ.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಆರೋಗ್ಯವನ್ನು ನಿರ್ಲಕ್ಷಿಸಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು. ಪಪಂ ಸದಸ್ಯ ವೆಂಕಟರಮಣ ಬಾಬು ಮಾತನಾಡಿದರು.
ಶಿಬಿರದಲ್ಲಿ 300 ಜನರಿಗೆ ಆರೋಗ್ಯ ತಪಾಸಣಾ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ 12 ಜನರನ್ನು ಬಳ್ಳಾರಿಯ ಎಂ.ಎಂ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೂಚಿಸಲಾಯಿತು.
ಎಂ.ಎಂ. ಆಸ್ಪತ್ರೆಯ ವೈದ್ಯ ಎಂ.ಝಡ್.ಮಹಮ್ಮದ್, ಡಾ.ಎಂ.ಐ.ಅನ್ವಾರ್, ಡಾ.ಖಲೀದ್ ಮುಖಿಂ, ಡಾ.ಅಬ್ದುಲ್ ಗಫೂರ್, ಡಾ.ಸಬ್ಬೀರ್ ಅಹಮ್ಮದ್, ಡಾ.ಶರೀಫ್, ಡಾ.ಇಸ್ರತ್ ಫಾತೀಮ್, ಡಾ.ತನ್ವೀರ್, ಪ್ರಮುಖರಾದ ಮಹಾಂತೇಶ, ಪ್ರತಾಪ್, ಅಮರೇಶ, ಸಾಧಕಲಿ, ರಮೇಶ್, ರಾಮಮೂರ್ತಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಇತರರಿದ್ದರು.