

ತೇರದಾಳ : ದೇಶಕಂಡ ಅಪರೂಪದ ಪ್ರಧಾನಿ ಮೋದಿ ಅವರ ಸಾಧನೆಯನ್ನು ಕ್ಷೇತ್ರದ ಜನತೆಯ ಮನೆಮನೆಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದಲ್ಲಿ ಮಹಾಸಂಪರ್ಕ ಅಭಿಯಾನದಡಿ ಶುಕ್ರವಾರ ಮನೆ ಮನೆ ಸಂಪರ್ಕ ಕಾರ್ಯ ಕೈಗೊಂಡು ಅವರು ಮಾತನಾಡಿದರು.
ಇದನ್ನೂ ಓದಿ: ಮೊಹರಂ ಹಬ್ಬದ ಸಂಭ್ರಮ
ಮಹಾಸಂಪರ್ಕ ಅಭಿಯಾನದಡಿ ಪಕ್ಷವನ್ನು ರಾಜ್ಯ ಅಥವಾ ಜಿಲ್ಲಾಮಟ್ಟದಲ್ಲಿ ಮಾತ್ರವಲ್ಲದೆ ಮಂಡಲ ಮಟ್ಟದಲ್ಲಿ ಬಲಪಡಿಸಲು ಕ್ಷೇತ್ರದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮನೆಮನೆ ಸಂಪರ್ಕ ಸಾಧಿಸುವ ಕಾರ್ಯ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಎಲ್ಲ ಪದಾಧಿಕಾರಿಗಳು ಪಕ್ಷದ ಬಲವರ್ಧನೆಗೆ ಸಕ್ರಿಯವಾಗಿ ಶ್ರಮಿಸಬೇಕು ಎಂದರು.
ಮುಖಂಡರಾದ ಸುರೇಶ ಅಕ್ಕಿವಾಟ, ಪ್ರಭಾಕರ ಭಾಗಿ, ಸಿದ್ದು ಅಮ್ಮಣಗಿ, ಸಂತೋಷ ಜಮಖಂಡಿ, ಶಂಕರ ಕುಂಬಾರ, ಕೇದಾರಿ ಪಾಟೀಲ, ರಾಮಣ್ಣ ಹಿಡಕಲ್, ವರ್ಧಮಾನ ಕಡಹಟ್ಟಿ, ಅಲ್ಲಪ್ಪ ಬಾಬಗೊಂಡ ಇತರರಿದ್ದರು.