ಅರಣ್ಯ ರಕ್ಷಣೆ ನಮ್ಮ ಕರ್ತವ್ಯವಾಗಲಿ

15sdp3
Published on

ಸಿದ್ದಾಪುರ: ಭೂಮಿ ಮೇಲಿನ ಎಲ್ಲ ಜೀವಿಗಳು ಬದುಕಲು ಅರಣ್ಯದ ಅವಲಂಬನೆ ಅವಶ್ಯಕವಾಗಿದೆ. ಹಾಗೆಯೇ ಅರಣ್ಯ ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಆದರೆ, ಇಂದು ಮಾನವನ ಅತಿಯಾದ ಆಸೆಯಿಂದಾಗಿ ಅರಣ್ಯ ನಾಶವಾಗುತ್ತಿದೆ. ಅರಣ್ಯ ನಾಶ ಮಾಡಿದರೆ ನಮ್ಮ ಮುಂದಿನ ಜನಾಂಗ ನಾಶ ಮಾಡಿದಂತೆ ಎಂದು ಸಿದ್ದಾಪುರ ವಲಯ ಅರಣ್ಯ ಅಧಿಕಾರಿ ಅಜಯ್ಕುಮಾರ್ ಎಂ.ಎಸ್. ಹೇಳಿದರು.

ತಾಲೂಕಿನ ಹೆಗ್ಗೋಡ್ಮನೆ ಸಭಾಭವನದಲ್ಲಿ ಅರಣ್ಯ ಇಲಾಖೆ ಸಿದ್ದಾಪುರ, ಗ್ರಾಮ ಅರಣ್ಯ ಸಮಿತಿ ಹೆಗ್ಗೋಡ್ಮನೆ ಹಾಗೂ ಆಧಾರ ಶಿಕ್ಷಣ, ಸ್ವ-ಉದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ನಡೆಯುತ್ತಿರುವ ಇಲಾಖೆಯ ಗ್ರೀನ್ ಇಂಡಿಯಾ ಮಿಷನ್ ಯೋಜನೆಯ ವಿಶೇಷ ಘಟಕದಡಿ ಹೊಲಿಗೆ ತರಬೇತಿ ಶಿಬಿರದಲ್ಲಿ ಕಿಟ್​ಗಳನ್ನು ವಿತರಿಸಿ ಅವರು ಗುರುವಾರ ಮಾತನಾಡಿದರು.

ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸಂತೋಷ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಆಧಾರ ಸಂಸ್ಥೆ ಅಧ್ಯಕ್ಷ ನಾಗರಾಜ್ ನಾಯ್ಕ ಮಾಳ್ಕೋಡ ಉಪಸ್ಥಿತರಿದ್ದರು ನಿಡಗೋಡ ಉಪವಲಯ ಅರಣ್ಯಾಧಿಕಾರಿ ನರೇಂದ್ರನಾಥ ಕದಂ ಸ್ವಾಗತಿಸಿದರು. ಆಧಾರ ಸಂಸ್ಥೆ ಸಂಯೋಜಕ ಸುರೇಶ ಮಡಿವಾಳ ವಂದಿಸಿದರು. ಹೊಲಿಗೆ ತರಬೇತಿ ಶಿಕ್ಷಕಿ ಜ್ಯೋತಿ ವಿನಯ ನಾಯ್ಕ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net