ಎಲ್ಲರೂ ಗಾಂಧೀಜಿ, ಶಾಸ್ತ್ರಿ ಆದರ್ಶ ಅಳವಡಿಸಿಕೊಳ್ಳಲಿ

pdb
Published on

ಪಡುಬಿದ್ರಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧಿ ಅವರ ಪಾತ್ರ ಪ್ರಮುಖವಾದರೆ, ಸ್ವಾತಂತ್ರ್ಯೋತ್ಸವ ಭಾರತದ ಅಭಿವೃದ್ಧಿಗೆ ಲಾಲ್ ಬಹದ್ದೂರು ಶಾಸ್ತ್ರಿ ಕಾರಣರಾಗಿದ್ದಾರೆ. ಸರಳ ಆದರ್ಶ ವ್ಯಕ್ತಿಗಳಾಗಿದ್ದು, ಸ್ವತಃ ಕಷ್ಟ ಅನುಭವಿಸಿ ಇತರರಿಗೆ ಒಳಿತನ್ನು ಮಾಡುವ ಪ್ರವೃತ್ತಿ ಹೊಂದಿದ್ದ ಅವರಿಬ್ಬರ ಜೀವನದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕಾಗಿದೆ ಎಂದು ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಸುಖೇಶಿಣಿ ಹೇಳಿದರು.

ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆಯಲ್ಲಿ ಮಾತನಾಡಿದರು.

ಕಾಲೇಜು ಪ್ರಾಂಶುಪಾಲ ಸಂಜೀವ ನಾಯ್ಕ ಮಾತನಾಡಿ, ದೇಶಪ್ರೇಮ ಅತಿ ಅಗತ್ಯ, ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದರು.

ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕಿ ಕಾಂತಿ ಭಟ್ ಉಪಸ್ಥಿತರಿದ್ದರು. ಶಿಕ್ಷಕಿ ಮಂಜುಶ್ರೀ ಮತ್ತು ಬಳಗದವರು ದೇಶಭಕ್ತಿ ಗೀತೆ ಹಾಡಿದರು. ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀಕಾಂತ್ ರಾವ್ ವಂದಿಸಿದರು. ಉಪನ್ಯಾಸಕಿ ಒಲ್ವಿಟಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net