ಕಮಲಶಿಲೆ ಶರನ್ನವರಾತ್ರಿ ಮಹೋತ್ಸವ ಸಂಪನ್ನ

kamalashile
Published on

ಸಿದ್ದಾಪುರ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ದೇವಳದಲ್ಲಿ ಶರನ್ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗುರುವಾರ ಸಂಪನ್ನಗೊಂಡಿತು.

ವಿಶೇಷ ಪೂಜೆ, ಮಹಾಪೂಜೆ, ತ್ರಿಕಾಲ ಬಲಿ ಉತ್ಸವ ಮತ್ತು ಮಹೋತ್ಸವ, ಶಾರದಾದೇವಿ ಪ್ರತಿಷ್ಠಾಪನೆ, ವಿಶೇಷ ಪೂಜೆ, ನವಮಿಯಂದು ಮಧ್ಯಾಹ್ನ ಶ್ರೀ ಚಂಡಿಕಾಯಾಗ, ರಾತ್ರಿ ರಜತ ರಥೋತ್ಸವ, ಪುಷ್ಪಕ ವಾಹನದಲ್ಲಿ ರಥಬೀದಿ ಹಾಗೂ ರಾಜಬೀದಿಯಲ್ಲಿ ಪುರ ಮೆರವಣಿಗೆ ನಡೆಯಿತು.

ಗುರುವಾರ ಮುಂಜಾನೆ 6.5ಕ್ಕೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ, ಕಣಜ ತುಂಬಿಸುವುದು, ಶಮೀ ಪೂಜೆ, ಸಂಜೆ ವಿಜಯೋತ್ಸವ ನಡೆಯಿತು. ನವರಾತ್ರಿ ಅಂಗವಾಗಿ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ ಹಾಗೂ ರಾತ್ರಿ ಅನ್ನಪ್ರಸಾದ, ಮಧ್ಯಾಹ್ನ ಚಂಡಿಕಾಯಾಗ, ಸಂಜೆ ರಂಗಪೂಜೆ, ರಾತ್ರಿ ಬೆಳ್ಳಿ ರಥೋತ್ಸವ ಸೇವೆ ನಡೆಯಿತು. ರಾಜ್ಯ ಹಾಗೂ ಹೊರರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net