

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಮಕ್ಕಳು ಜ್ಞಾನ ಸಂಪಾದನೆ ಕಡೆಗೆ ಗಮನಹರಿಸಬೇಕು. ನಮ್ಮ ಮೌಲ್ಯ ಸಂಸ್ಕಾರವನ್ನು ಬಿಡದೆ ಸಾಧನೆಯ ಎತ್ತರಕ್ಕೆ ಏರಬೇಕು. ವಿದ್ಯಾರ್ಥಿ ಜೀವನದಲ್ಲೇ ಪುಸ್ತಕ ಓದುವ ಮೊದಲಾದ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಉಡುಪಿ ಶ್ರೀ ಅದವಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಅದವಾರಿನಲ್ಲಿ ಗುರುವಾರ ನಡೆದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಹಾಗೂ ವಿದ್ಯಾರ್ಥಿ ಮಂಡಳಿ ಉದ್ಘಾಟನೆ ಮತ್ತು ಬಾಲಪಾಠ ವಾಲಾ ಗ್ರಂಥವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಅದವಾರು ಮಠ ಶಿಕ್ಷಣ ಮಂಡಳಿ ಗೌರವ ಕಾರ್ಯದರ್ಶಿ ಎ.ಪಿ.ಭಟ್ ವಾತನಾಡಿ, ವಿಬುಧೇಶ ತೀರ್ಥರು 1950 ರ ಕಾಲದಲ್ಲಿ ಕುಗ್ರಾಮವಾಗಿದ್ದ ಅದವಾರಿನಲ್ಲಿ ಎಲ ್ಲಊರ ಜನರಿಗೆ ಒಳ್ಳೆಯ ಶಿಕ್ಷಣದ ಅಗತ್ಯ ಮನಗಂಡು ಪೂರ್ಣಪ್ರಜ್ಞ ಕನ್ನಡ ವಾಧ್ಯಮ ಪ್ರೌಢಶಾಲೆ ಸ್ಥಾಪನೆ ವಾಡಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದರು ಎಂದರು.
ಹೊಸದಾಗಿ ಆಯ್ಕೆಗೊಂಡ 3 ಸಂಸ್ಥೆಗಳ ವಿದ್ಯಾರ್ಥಿ ಪ್ರತಿನಿಧಿಗಳಾದ ತೇಜಸ್ ಆಚಾರ್ಯ, ಪ್ರಥಮ್ ಹಾಗೂ ಗಗನ್ ಆರ್.ಶೆಟ್ಟಿ ಅವರಿಗೆ ಕನ್ನಡ ವಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀಕಾಂತ್ ರಾವ್ ಪ್ರತಿಜ್ಞಾವಿಧಿ ಬೋಧಿಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕುಂಜೂರು ಕೇಶವ ಉಡುಪ ಸ್ಮಾರಕ ಶ್ರೀಧರ ಉಡುಪ ಕೊಡ ವಾಡಿದ ಪಾರಿತೋಷಕ ಮತ್ತು ನಗದು ಬಹುವಾನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸ್ವಾಮೀಜಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು.
ಅದವಾರು ಶಿಕ್ಷಣ ಸಂಸ್ಥೆಗಳ ಗೌರವ ಕೋಶಾಧಿಕಾರಿ ಸಿಎ ಗಣೇಶ ಹೆಬ್ಬಾರ್, ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ, ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕ, ಆಂಗ್ಲ ವಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಮಂಜುನಾಥ ಎ.ವಿ., ದೇವಿಪ್ರಸಾದ್ ಹಾಗೂ ಜಯಶಂಕರ ಕಂಗಣ್ಣಾರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಗಗನ್ ಆರ್. ಶೆಟ್ಟಿ ಸ್ವಾಗತಿಸಿದರು. ಸಿಂಚನಾ ವಂದಿಸಿದರು. ಕೃತಿ ಜಿ. ನಿರೂಪಿಸಿದರು.