ಕೃಷಿ ಉಳಿಸಿ ಬೆಳೆಸುವ ಕಾರ್ಯವಾಗಲಿ

sid (6)
Published on

ವಿಜಯವಾಣಿ ಸುದ್ದಿಜಾಲ ಆರ್ಡಿ

ಕೃಷಿ ಬದುಕಿನ ನೈಜತೆ ಜನರಲ್ಲಿ ಇಳಿಮುಖವಾಗುತ್ತಿರುವ ಸನ್ನಿವೇಶದಲ್ಲಿ ಗ್ರಾಮೀಣ ಸೋಗಡಿನ ಗೋಂಸ್ರ್ ಗೆದ್ದಿ ಅಸಾಡಿಯಂಗ್ ಒಂದ್ ದಿನ ಕಾರ್ಯಕ್ರಮವು ಯುವ ಜನತೆಯಲ್ಲಿ ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವಲ್ಲಿ ಪೂರಕವಾಗಿದೆ. ಕೃಷಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಈ ನಿಟ್ಟಿನಲ್ಲಿ ಯುವ ಜನತೆಯ ಹೊಣೆಗಾರಿಕೆ ಮಹತ್ವದ್ದು ಎಂದು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಕಮ್ಗೋಳಿ ಹೇಳಿದರು.

ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಅರಸಮ್ಮಕಾನು ನವಶಕ್ತಿ ಯುವಕ ಮಂಡಲ ಹಾಗೂ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಅರಸಮ್ಮಕಾನು ಸಾಂತನಮಕ್ಕಿ ಗದ್ದೆಯಲ್ಲಿ ಗೋಂಸ್ರ್ ಗೆದ್ದಿ ಅಸಾಡಿಯಂಗ್ ಒಂದ್ ದಿನ ಗೆದ್ದಿ ಬೈಲಂಗ್ ಕಾರ್ಯಕ್ರಮವನ್ನು ಕೆಸರು ಗದ್ದೆಗೆ ಹಾಲೆರೆಯುವ ಮೂಲಕ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಕೆಸರು ಗದ್ದೆಯಲ್ಲಿ ಬಾಲ್ ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಪ್ರಸನ್ನ ತೊನ್ನಾಸೆ, ಪ್ರಸಾದ್ ತೊನ್ನಾಸೆ, ರೋಹಿತ್‌ಕುಮಾರ್ ಶೆಟ್ಟಿ ನೂಜಟ್ಟು ಸಹಕಾರದಲ್ಲಿ ಕಂಬಳದ ಕೋಣಗಳನ್ನು ಕೆಸರು ಗದ್ದೆಯಲ್ಲಿ ಓಡಿಸುವುದರೊಂದಿಗೆ ಗೋಂಸ್ರ್ ಗೆದ್ದಿ ಅಸಾಡಿಯಂಗ್ ಒಂದ್ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅರಸಮ್ಮಕಾನು ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಅರುಣ್ ಶೆಟ್ಟಿ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಸಂಜೀವ ಆರ್ಡಿ, ಮಾಜಿ ಅಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ಸದಸ್ಯ ಬಿ.ಶಂಕರ ಶೆಟ್ಟಿ ಬೆಳ್ವೆ, ಲಿಯೋ ಕ್ಲಬ್ ಅಧ್ಯಕ್ಷ ಸೃಜನ್ ಶೆಟ್ಟಿ, ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ದಯಾನಂದ ಪೂಜಾರಿ ಹಂಜ, ವಿಜಯಕುಮಾರ್ ಶೆಟ್ಟಿ ಸಾಂತನಮಕ್ಕಿ, ಗುಲಾಬಿ ಶೆಟ್ಟಿ ಸಾಂತನಮಕ್ಕಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕೆಸರು ಗದ್ದೆಯಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಕ್ರೀಡೆಗಳು ನಡೆಯಿತು. ಕಾರ್ಯದರ್ಶಿ ಅರುಣ್ ಶೆಟ್ಟಿ ಸ್ವಾಗತಿಸಿದರು. ಕೀರ್ತಿಕುಮಾರ್ ಶೆಟ್ಟಿ ಅರಸಮ್ಮಕಾನು ನಿರೂಪಿಸಿದರು. ಗಣೇಶ್ ಅರಸಮ್ಮಕಾನು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net