ಜನರಿಗೆ ಸಮರ್ಪಕ ಮಾಹಿತಿ ಒದಗಿಸಲಿ

25RAM1
Published on

ರಾಮದುರ್ಗ: ಇಲಾಖೆಯ ಸೌಲಭ್ಯಗಳ ಕುರಿತಾಗಿ ಕರಪತ್ರಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವಲ್ಲಿ ಅಧಿಕಾರಿಗಳು ಶ್ರಮಿಸಬೇಕು. ಇದರಿಂದ ಜನರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಅಶೋಕ ಪಟ್ಟಣ ಸೂಚಿಸಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎರಡು ಮತ್ತು ಮೂರನೇ ತೆಮಾಸಿಕ ಕೆಡಿಪಿ ಸಭೆ ಅಧ್ಯತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಬರುವ ಸಾರ್ವಜನಿಕರಿಗೆ ಸಿಬ್ಬಂದಿ ಲಂಚದ ಬೇಡಿಕೆ ಇಡುವ ಪ್ರಸಂಗಗಳು ನಡೆಯುತ್ತಿವೆ. ಇಂಥಹ ಪ್ರಕರಣ ಮರುಕಳಿಸಿದಲ್ಲಿ ಸೂಕ್ತ ಕಾನೂನು ಕ್ರಮದ ಎಚ್ಚರಿಕೆ ನೀಡಿದರು.

ಯಾವುದೇ ಪರವಾನಗೆ ಇಲ್ಲದೇ ಪಟ್ಟಣದಲ್ಲಿ ಅನಧಿಕೃತ ಕಟೌಟ್​ ಹಾಗೂ ಡಬ್ಬಾ ಅಂಗಡಿ ತಲೆ ಎತ್ತುತ್ತಿವೆ. ಪುರಸಭೆ ಹಾಗೂ ಹೆಸ್ಕಾಂ ಕೂಡಲೇ ಅವುಗಳಿಗೆ ಕಡಿವಾಣ ಹಾಕಬೇಕು ಎಂದರು. ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ, ಹೆಸ್ಕಾಂ ಅಭಿಯಂತ ಕಿರಣ ಸಣ್ಣಕ್ಕಿ ಶ್ರೀವೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರೈತರ ಪಂಪಸೆಟ್​ಗಳ ವಿದ್ಯುತ್​ ಪರಿವರ್ತಕಗಳು ಹಾಳಾದಲ್ಲಿ 24 ಗಂಟೆಯಲ್ಲಿ ಹೊಸ ಪರಿವರ್ತಕ ನೀಡಬೇಕು. ಹಣ ನೀಡುವ ರೈತರಿಗೆ ತ್ವರಿತವಾಗಿ ವಿದ್ಯುತ್​ ಪರಿವರ್ತಕ ವಿತರಿಸುವ ಬಗ್ಗೆ ದೂರು ಕೇಳಿ ಬಂದಿವೆ. ಹೀಗಾದಲ್ಲಿ ತಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶಾಸಕ ಪಟ್ಟಣ ಎಚ್ಚರಿಸಿದರು.

ತಹಸೀಲ್ದಾರ್​ ಪ್ರಕಾಶ ಹೊಳೆಪ್ಪಗೋಳ, ತಾಪಂ ಇಒ ಬಸವರಾಜ ಐನಾಪುರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net