ಕಾವೇರಿ ಸಂರಕ್ಷಣೆಗೆ ವಿಶೇಷ ಕಾಯ್ದೆ ರೂಪಿಸಲಿ

ಕಾವೇರಿ ಸಂರಕ್ಷಣೆಗೆ ವಿಶೇಷ ಕಾಯ್ದೆ ರೂಪಿಸಲಿ
Published on

ಅರಕಲಗೂಡು: ನಾಡಿನ ಜೀವನದಿ ಕಾವೇರಿ ಸಂರಕ್ಷಣೆಗೆ ವಿಶೇಷ ಕಾಯ್ದೆ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ರಾವಂದೂರು ಹರಳಹಳ್ಳಿ ಗುರುಮಠದ ಶ್ರೀಕಂಠ ಆರಾಧ್ಯ ಅಭಿಪ್ರಾಯಪಟ್ಟರು.

ತಾಲೂಕಿನಲ್ಲಿ ರಾಮನಾಥಪುರದ ರಾಮೇಶ್ವರಸ್ವಾಮಿ ದೇವಾಲಯ ಸನ್ನಿಧಿಯ ವಹ್ನಿಪುಷ್ಕರಣಿ ತಟದಲ್ಲಿ ಮಂಗಳವಾರ ಪೂರ್ಣ ಕಾವೇರಿ ನದಿಗೆ ವಿಶೇಷ ಆರತಿ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಉಳಿವಿಗೆ ಸಾಧುಸಂತರು ಹಾಗೂ ನದಿ ಆಂದೋಲನ ಸಮಿತಿ ಒತ್ತಾಯಿಸುತ್ತಾ ಬಂದಿದೆ. ನದಿ ಸಂರಕ್ಷಣೆಗೆ ವಿಶೇಷ ಕಾಯ್ದೆ ಜಾರಿಗೆ ತಂದು ಕಾವೇರಿ ಮಲಿನವಾಗದ ರೀತಿ ಸ್ವಚ್ಛತೆ ಕಾಪಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.

ಇಲ್ಲಿಯ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ನಿರಂತರವಾಗಿ ಕಾವೇರಿ ಅಭಿಯಾನ ಯಾತ್ರೆ ಮಾಡಿಕೊಂಡು ಬರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿರದನಹಳ್ಳಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ರಘು, ಸಂಘಟನೆ ಕಾರ್ಯದರ್ಶಿ ಶಿವಪ್ಪ, ತಾಲೂಕು ಸಮಿತಿ ಅಧ್ಯಕ್ಷ ಸಿದ್ದರಾಜು, ಖಜಾಂಚಿ ಕೇಶವ, ಅದರ್ಶ್, ಮನೋಜ್, ವಾಸುದೇವ್, ಮಂಜು, ಭಾಗಮ್ಮ, ಯಶೋದಮ್ಮ ಇತರರಿದ್ದರು. ಶ್ರೀ ರಾಮೇಶ್ವರ ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸ್ ನದಿಗೆ ಅರತಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net