ಕಡವಾಡದಲ್ಲಿ ಚಿರತೆ ಪ್ರತ್ಯಕ್ಷ

Cheeta
Published on

ಕಾರವಾರ: ತಾಲೂಕಿನ ಕಡವಾಡ ಮಹಾದೇವ ದೇವಸ್ಥಾನದ ಎದುರಿನ ಗುಡ್ಡದಲ್ಲಿ ಬುಧವಾರ ಚಿರತೆ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದೆ.
ಗುಡ್ಡದ ತುದಿಯಲ್ಲಿ ಕಾಣಿಸಿಕೊಂಡ ಪ್ರಾಣಿಯನ್ನು ಚಿತ್ರವನ್ನು ಕೆಲವರು ಸೆರೆ ಹಿಡಿದಿದ್ದಾರೆ.

ಸಮೀಪದಲ್ಲೇ ಸಾಕಷ್ಟು ಮನೆಗಳಿದ್ದು, ಮನೆಗಳಿಗೆ ನುಗ್ಗಿದರೆ ಎಂಬ ಆತಂಕದಲ್ಲಿದ್ದಾರೆ.

ಚಿರತೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ಇದೆ. ಅದು, ಮನೆಗಳಿಗೆ ಬರದಂತೆ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಆರ್‌ಎಫ್‌ಒ ರಾಘವೇಂದ್ರ ನಾಯ್ಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net