

ಕಾರವಾರ: ಇಂದ್ರಿಯಗಳು ಕೆಟ್ಟದಾಗಿ ಅಥವಾ ಒಳ್ಳೆಯದಾಗಿ ಪರಿವರ್ತಿಸಲು ಮನಸ್ಸೇ ಕಾರಣವಾಗಿದೆ. ಮನಸ್ಸುಸ್ಥಿರವಾಗಿರಬೇಕು. ಅದಕ್ಕೆ ಸಂಗೀತವು ಸಹಕಾರಿಯಾಗಿದೆ ಎಂದು ಪದ್ಮಪುಷ್ಪ ವೇದವೇದಾಂತ ಗುರುಕುಲದ ಪ್ರಾಚಾರ್ಯ ಶಿವಮೂರ್ತಿ ಜೋಯಿಸ್ ಹೇಳಿದರು.
ಕೆನರಾ ವೆಲ್‌ಫೇರ್ ಟ್ರಸ್ಟ್ ನಡೆಸುತ್ತಿರುವ ದಿನಕರ ಕಲಾನಿಕೇತನ ಸಂಗೀತ ಶಾಲೆಯಿಂದ ನಗರದ ಹಿಂದು ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗುರು ನಮನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಮನಸ್ಸಿನ ಪ್ರಸನ್ನತೆ, ಸೌಮ್ಯತೆ, ಮೌನ, ಆತ್ಮಸಂಯಮ ಮತ್ತು ಭಾವಶುದ್ಧಿ ಇವು ಮಾನಸಿಕ ತಪಸ್ಸಾಗಿದೆ ಎಂದರು.
ಇದನ್ನೂ ಓದಿ:ಮೂರು ತಿಂಗಳುಗಳಿಂದ ಇಸ್ರೋ ವಿಜ್ಞಾನಿಗಳಿಗೆ ಸಂಬಳ ಪಾವತಿ ಆಗಿಲ್ಲವೇ? ಅಸಲಿಯತ್ತು ಏನು?
ಸಮತಿ ದಾಮ್ಲೆ ಪ್ರೌಢಶಾಲೆಯ ಶಿಕ್ಷಕ ಸಂತೋಷ ಶೇಟ್ ಕಾರ್ಯಕ್ರಮ ಉದ್ಘಾಟಿಸಿದರು.
ಟ್ರಸ್ಟ್ ನ ಅಧ್ಯಕ್ಷ ಎಂ.ಪಿ.ಕಾಮತ್, ಆಡಳಿತಾಧಿಕಾರಿ ಕೆ.ವಿ.ಶೆಟ್ಟಿ, ದಿವೇಕರ ಕಾಲೇಜಿನ ಪ್ರಾಚಾರ್ಯ ಕೇಶವ ಕೆ.ಜಿ., ಹರೀಶ ಕಾಮತ, ಪ್ರಶಾಂತ ನಾಯ್ಕ, ರಾಜು ನಾಯ್ಕ, ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅರುಣ ರಾಣೆ, ಬಾಲಮಂದಿರ ಪ್ರೌಢಶಾಲೆಯ ಪ್ರಾಂಶುಪಾಲೆ ಅಂಜಲಿ ಮಾನೆ ಇದ್ದರು.
ಸಾಯಿಶ್ರೀ ಶೇಟ್, ಶ್ರೇಯಾ ನಾಯ್ಕ, ದಿಶಾ ಶಾನಭಾಗ ಪ್ರಾರ್ಥಿಸಿದರು.
ವೀಣಾ ಭಾಗ್ವತ ಪ್ರಾಸ್ತಾವಿಕವಾಗಿ ಮಾತನಾಡಿದರು. ಲತಾ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ವೇದಾ ನಾಯ್ಕ ವಂದಿಸಿದರು. ಪ್ರೇಮಾ ಟಿಎಂಆರ್ ನಿರೂಪಿಸಿದರು.