ಮದ್ದೂರು ವ್ಯಾಪ್ತಿಯಲ್ಲಿ ಚಿರತೆ ಸಂಚಾರ

Oplus_131072
Oplus_131072
Published on

ಯಳಂದೂರು: ತಾಲೂಕಿನ ಮದ್ದೂರು ಗ್ರಾಮದ ಹೊರ ವಲಯದಲ್ಲಿ ಚಿರತೆ ಕಾಣಿಸಿಕೊಂಡಿರುವುದಲ್ಲದೆ, ಬೀದಿ ನಾಯಿಯನ್ನು ಹಿಡಿದು ತಿಂದಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.


ರಾಜಮ್ಮ ರಂಗಸ್ವಾಮಿ ಅವರ ಜಮೀನಿನ ಬಳಿ ನಾಯಿಯನ್ನು ತಿಂದಿದ್ದು, ಆ ಸ್ಥಳದಲ್ಲಿ ರಕ್ತದ ಕಲೆಯಾಗಿದೆ. ಈ ಹಿಂದೆಯೂ ಇಲ್ಲೇ ಬೆಕ್ಕು ಹಾಗೂ ನಾಯಿಯನ್ನು ಹೊತ್ತೊಯ್ದು ಚಿರತೆ ತಿಂದಿತ್ತು. ಈ ಭಾಗದ ಜಮೀನುಗಳ ಸುತ್ತ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಈಗ ಗದ್ದೆಗಳಲ್ಲಿ ಭತ್ತ ಬೆಳೆದಿರುವ ರೈತರು ತಮ್ಮ ಜಮೀನಿಗೆ ತೆರಳುವುದಕ್ಕೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.


ಈ ಹಿಂದೆಯೂ ಈ ಗ್ರಾಮದ ಸುವರ್ಣಾವತಿ ನದಿ ತೀರ ಹಾಗೂ ಕಾಲುವೆ ಬಳಿ ಚಿರತೆ ಕಾಣಿಸಿಕೊಂಡಿತ್ತು. ಈಗ ಬೀದಿ ನಾಯಿಯನ್ನು ಎಳೆದೊಯ್ದಿದ್ದು ಸಾರ್ವಜನಿಕರ ಆತಂಕ ಹೆಚ್ಚಲು ಕಾರಣವಾಗಿದೆ.
ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿ ಬೋನನ್ನು ಇಟ್ಟು ಚಿರತೆ ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net