ಇರಿಯಣ್ಣಿಯಲ್ಲಿ ಚಿರತೆ ಸಂಚಾರ: ಅರಣ್ಯ ಇಲಾಖೆ ಕಾರ್ಯಾಚರಣೆ ಚುರುಕು

leopard
Published on

ಕಾಸರಗೋಡು: ಬೋವಿಕ್ಕಾನ ಸಮೀಪ ಇರಿಯಣ್ಣಿ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಸ್ಥಾಪಿಸಿರುವ ಸಿಸಿ ಕ್ಯಾಮರಾದಲ್ಲಿ ಚಿರತೆ ಸಂಚಾರದ ದೃಶ್ಯ ಪತ್ತೆಯಾಗಿದೆ.

ಕೆಲವೇ ದಿವಸಗಳ ಹಿಂದೆ ಈ ಪ್ರದೇಶದಲ್ಲಿ ಚಿರತೆಯದ್ದೆನ್ನಲಾದ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸಿಸಿ ಕ್ಯಾಮರಾದಲ್ಲಿ ಚಿರತೆ ಕಾಣಿಸಿಕೊಳ್ಳುವ ಮೂಲಕ ಚಿರತೆ ಸಂಚಾರ ಖಚಿತಗೊಂಡಿದೆ. ಇರಿಯಣ್ಣಿ ಸನಿಹದ ಕುಣಿಯೇರಿ ಎಂಬಲ್ಲಿ ಕೆಲವು ದಿವಸ ಹಿಂದೆ ಚಿರತೆ ಕಂಡಿರುವುದಾಗಿ ವದಂತಿ ಹರಡಿತ್ತು.

ಇಲ್ಲಿಂದ ಒಂದು ಕಿ.ಮೀ ದೂರದ ಅನಿಲ್‌ಕುಮಾರ್ ಎಂಬುವರ ತೋಟದಲ್ಲಿ ಚಿರತೆ ಹೆಜ್ಜೆಗುರುತು ಕಾಣಿಸಿಕೊಂಡಿದ್ದು, ಸ್ಥಳೀಯ ಜನತೆ ಆತಂಕದಲ್ಲಿ ಕಾಲ ಕಳೆಯುವಂತಾಗಿತ್ತು. ಚಿರತೆ ಪತ್ತೆಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸುತ್ತಿರುವಾಗ ಸಿಸಿ ಕ್ಯಾಮರದಲ್ಲೂ ಕಾಣಿಸಿಕೊಂಡಿರುವುದರಿಂದ ಚಿರತೆ ಪತ್ತೆಕಾರ್ಯ ಚುರುಕುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net