

ಪುತ್ತೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.೧೫ರಂದು ನಡೆಯುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪುತ್ತೂರಿನಲ್ಲಿ ಕಬಕದಿಂದ ಕನಕಮಜಲು ತನಕ ಮಾನವ ಸರಪಳಿಯು ನಡೆಯಲಿದ್ದು, ಪ್ರಜಾಪ್ರಭುತ್ವದ ಮಹತ್ವ ಅರಿಯುವ ಕಾರ್ಯವಾಗಬೇಕು. ಸುಮಾರು ೧೫ ಸಾವಿರ ಮಕ್ಕಳು ಸೇರಿ ೩೦ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಽಕಾರಿಗಳ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ಡಿವೈಎಸ್ಪಿ ಅರುಣ್ ನಾಗೇಗೌಡ ಮಾಹಿತಿ ನೀಡಿದರು.
ಕಬಕದಲ್ಲಿ ಬಂಟ್ವಾಳ ತಾಲೂಕಿನವರು ದ್ವಜ ಹಸ್ತಾಂತರ ಮಾಡುವ ಮೂಲಕ ಮಾನವ ಸರಪಳಿಗೆ ಚಾಲನೆ ನೀಡಿದರೆ, ಕನಕ ಮಜಲಿನಲ್ಲಿ ಸುಳ್ಯದವರಿಗೆ ಧ್ವಜ ನೀಡುವ ಮೂಲಕ ಕೊನೆಯಾಗಲಿದೆ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಧ್ವಜದೊಂದಿಗೆ ತೆರೆದ ವಾಹನದಲ್ಲಿ ಸಂಚರಿಸಲಿದ್ದಾರೆ. ಕಬಕದಲ್ಲಿ ಬೆಳಗ್ಗೆ ೯.೩೦ಕ್ಕೆ ಮಾನವ ಸರಪಳಿಯ ಉದ್ಘಾಟನೆ ನಡೆಯಲಿದೆ. ಸಂಪ್ಯದಿಂದ ಕುಂಬ್ರದ ತನಕ ಬೈಕ್ ರ್ಯಾಲಿ ನಡೆಯಲಿದೆ. ಕುಂಬ್ರದಿಂದ ೧ ಕಿ.ಮೀ ಮಾನವ ಸರಪಳಿ ಬಳಿಕ ಕೌಡಿಚ್ಚಾರ್ ತನಕ ಬೈಕ್ ರ್ಯಾಲಿ, ಕೌಡಿಚ್ಚಾರ್ನಿಂದ ೧ ಕಿ.ಮೀ ಮಾನವ ಸರಪಳಿ, ಅಲ್ಲಿಂದ ಕಾವು ತನಕ ಬೈಕ್ ರ್ಯಾಲಿ, ಕಾವುನಿಂದ ೧ ಕಿ.ಮೀ ಮಾನವ ಸರಪಳಿ ಅಲ್ಲಿಂದ ಕನಕಮಜಲು ತನಕ ಬೈಕ್ ರ್ಯಾಲಿ ನಡೆಯಲಿದೆ.
ತಹಸೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಽಕಾರಿ ನವೀನ್ ಕುಮಾರ ಭಂಡಾರಿ, ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಎಸ್.ಆರ್, ಡಿವೈಎಸ್ಪಿ ಅರುಣ್ ನಾಗೇಗೌಡ, ಪೌರಾಯುಕ್ತ ಮಧು ಎಸ್ ಮನೋಹರ್, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಉಸ್ತುವಾರಿ ಉಮಾನಾಥ್ ಉಪಸ್ಥಿತರಿದ್ದರು.