ಪುನರೂರು ಪರಿಸರದಲ್ಲಿ ಚಿರತೆ ಹಾವಳಿ

Leapord
Published on

ಕಟೀಲು: ಕಿನ್ನಿಗೋಳಿ, ಕಟೀಲು, ಪುನರೂರು ಪರಿಸರದಲ್ಲಿ ಎರಡು ದಿನಗಳಿಂದ ಚಿರತೆ ಹಾವಳಿ ಆರಂಭವಾಗಿದ್ದು, ಹಲವು ಮನೆಗಳ ಸಾಕುನಾಯಿಗಳು ಚಿರತೆಗೆ ಆಹಾರವಾಗಿವೆ. ಮುಂಜಾನೆ ವಾಹನಗಳಲ್ಲಿ ಸಂಚರಿಸುತ್ತಿದ್ದವರಿಗೆ ಚಿರತೆ ಕಾಣಲು ಸಿಕ್ಕಿವೆ.

ಈ ಮಧ್ಯೆ ಪ್ರಾಣಭೀತಿಯಿಂದ ನರಿಗಳ ಹಿಂಡು ಸ್ಥಳೀಯ ಮನೆಗಳ ಸಮೀಪ ಬರುತ್ತಿವೆ. ಜನರು ಸಂಚರಿಸಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇದುವರೆಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net