More

    ಚಂದೇರದಲ್ಲಿ ರೈಲಿನಿಂದ ಬಿದ್ದು ಯುವಕ ಸಾವು

    ಕಾಸರಗೋಡು: ಚಂದೇರದಲ್ಲಿ ರೈಲಿನಿಂದ ಹಳಿಗೆ ಬಿದ್ದ ಯುವಕ ಮೃತಪಟ್ಟಿದ್ದಾನೆ. ಮಂಗಳೂರಿಗೆ ಸಂಚರಿಸುತ್ತಿದ್ದ ಏರನಾಡ್ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಸುಮಾರು 30ರ ಹರೆಯದ ಯುವಕ, ಚಂದೇರ ಸನಿಹ ರೈಲಿನಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯುವಕನ ಗುರುತು ಪತ್ತೆಯಾಗಿಲ್ಲ. ಇನ್ನೊಂದು ಅಪಘಾತದಲ್ಲಿ ತೃಕ್ಕರಿಪುರ ರೈಲ್ವೆ ನಿಲ್ದಾಣ ಸನಿಹ ಸುಮಾರು 60ರ ಹರೆಯದ ವ್ಯಕ್ತಿಯ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ರೈಲು ಡಿಕ್ಕಿಯಾಗಿ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಎರಡೂ ಪ್ರಕರಣಗಳ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts